fbpx
ಸಮಾಚಾರ

“ಬೀದಿಯಲ್ಲಿ ಬೊಗಳುವ ನಾಯಿಗಳಿಗೆ ಹೆಚ್ಚು ತಲೆಕ್ಕೆಡಿಸಿಕೊಳ್ಳುವುದಿಲ್ಲ” ಸಂಬರಗಿಗೆ ಸಂಜನಾ ಟಾಂಗ್

ಸಂಜನಾ ಬಗ್ಗೆ ಸಿನಿಮಾ ಇಂಡಸ್ಟ್ರಿಗೆ ಗೊತ್ತು, ಆಕೆ ಬಗ್ಗೆ ಮಾತನಾಡಿ ನಾನು ಬಾಯಿ ಗಲೀಜು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದ ಪ್ರಶಾಂತ್ ಸಂಭರ್ಗಿ ವಿರುದ್ಧ ನಟಿ ಸಂಜೆ ಕಿಡಿಕಾರಿದ್ದಾರೆ.

ಈ ಕುರಿತು ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಸಂಜನಾ ” ಪ್ರಶಾಂತ್ ಸಂಬರಗಿ ಎಂಬ ವ್ಯಕ್ತಿ ನನ್ನ ಬಗ್ಗೆ ಮಾತನಾಡಿದ್ದಾರೆ. ಅವರು ರಾಜಕಾರಣಿಗಳಿಗೆ ಬ್ರೋಕರ್‌ ಎಂದು ಕೇಳಿದ್ದೇನೆಯೇ ಹೊರತು, ಅವರು ಯಾರೆಂಬುವುದೂ ಗೊತ್ತಿಲ್ಲ. ಅವರು ಮಾಧ್ಯಮ ಎದುರು ಗಂಡ ಹೆಂಡತಿ ನಟಿ ಎಂದು ಹೇಳಿರುವುದನ್ನು ಕೇಳಿಸಿಕೊಂಡಿರುವೆ. ನಾನು ಒಂದೇ ಸಿನಿಮಾ ಮಾಡಿ, ಇಷ್ಟೆಲ್ಲಾ ಸಂಪಾದನೆ ಮಾಡಿರುವೆ ಎಂದಿದ್ದಾರೆ. ದಯವಿಟ್ಟು ನನ್ನ ವಿಕಿಪೀಡಿಯಾ ನೋಡಿದರೆ ನಾನೆಷ್ಟು ಸಿನಿಮಾಗಳಲ್ಲಿ, ಯಾವ ಯಾವ ಭಾಷೆಗಳಲ್ಲಿ ನಟಿಸಿರುವೆನೆಂದು ತಿಳಿಯುತ್ತದೆ. ಇದುವರೆಗೆ ಸುಮಾರು 50ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ಅಭಿನಯಿಸಿರುವೆ.”

“ಪ್ರಶಾಂತ್‌ ಕೇವಲ 200 ರೂಪಾಯಿಗೆ ಟಿವಿ ಮುಂದೆ ಪ್ರಚಾರಕ್ಕೆ ಬಂದು ಕೂರುತ್ತಾರೆ. ನನ್ನ ಹೆಸರು ಹೇಳುವಷ್ಟು ತಾಕತ್ತು ಅವರಿಗೆ ಇಲ್ಲ. ಅದಕ್ಕೆ ನಾನು ನಟಿಸಿದ ಚಿತ್ರವನ್ನು ಹೆಸರಿಸುತ್ತಾರೆ. ನನ್ನ ಪೋಷಕರು ನನಗೆ ಒಂದು ಮಾತು ಹೇಳಿಕೊಟ್ಟಿದ್ದಾರೆ. ‘ಬೀದಿ ನಾಯಿಗಳು ಬೋಗಳುತ್ತಿದ್ದರೆ, ನೀನು ಬಟ್ಟೆ ಬಿಚ್ಚಿಕೊಂಡು ತಿರುಗಿ ಬೊಗಳಬಾರದು. ಅದನ್ನು ನಿರ್ಲಕ್ಷಿಸಿ ಮುಂದುವರಿ,’ ಎಂದು. ಸಂಬರಗಿ ವಿಷಯದಲ್ಲಿಯೂ ನಾನು ಅದನ್ನೇ ಮಾಡುವೆ,” ಎಂದು ಸಂಜನಾ ತಿಳಿಸಿದ್ದಾರೆ.

ಇಂದಿರಾನಗರದಲ್ಲಿ ಮನೆ, ಮೂರು ಕಾರು ಹೇಗೆ ಸಾಧ್ಯವಾಯಿತು ಎಂದು ಕೇಳುವವರಿದ್ದಾರೆ. ಇದಕ್ಕೆ ನಾನು ಬಹಳ ಕಷ್ಟಪಟ್ಟಿದ್ದೇನೆ. ಕಳೆದ 16 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ ಮತ್ತು ಹೇಗೆ ಸಂಪಾದಿಸಿದ್ದೇನೆ ಎಂಬುದನ್ನು ಸಾಕ್ಷಿ ಸಮೇತ ತೋರಿಸಬಲ್ಲೆ. ಅದರಲ್ಲೇನಾದರೂ ತಪ್ಪಾಗಿದ್ದರೆ, ಅದನ್ನು ಕೇಳುವುದಕ್ಕೆ ಇನ್​ಕಮ್​ ಟ್ಯಾಕ್ಸ್​ ಇಲಾಖೆ ಇದೆ. ಯಾರೋ ಬ್ರೋಕರ್​ಗೆ ಕೇಳುವ ಹಕ್ಕಿಲ್ಲ ‘ ಎನ್ನುತ್ತಾರೆ ಅವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top