fbpx
ಸಮಾಚಾರ

ಹಿಂದೂ ಧಾರ್ಮಿಕ ನಂಬಿಕೆಗೆ ದಕ್ಕೆ: ನಟಿ ನಿವೇದಿತಾ ವಿರುದ್ಧ ಎಫ್ಐಆರ್​ ದಾಖಲು

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ವಿಚಾರ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ನಟಿ ನಿವೇದಿತಾ ವಿರುದ್ಧ ಎಫ್ಐಆರ್​ ದಾಖಲಾಗಿದೆ.. ಗಾಂಜಾ ಎನ್ನುವುದು ತುಳಸಿಯಷ್ಟೇ ಪವಿತ್ರ ಎಂದು ಮಾದ್ಯಮಗಳೆದುರು ಹೇಳಿಕೆ ನೀಡಿದ್ದ ನಟಿಯ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾವನ್ನು ತುಳಸಿಗೆ ಹೋಲಿಸುವ ಮೂಲಕ ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆಂದು ಆರೋಪ ಮಾಡಿ ಎ.ದೀಪಕ್ ಅನ್ನೋರು ಪೊಲೀಸರಿಗೆ ದೂರು ನೀಡಿದ್ದಾರೆ.

ಸೆ. 1ರಂದು ಚಿತ್ರೋದ್ಯಮದಲ್ಲಿ ಡ್ರಗ್ಸ್ ವಿಚಾರವಾಗಿ ಮಾದ್ಯಮದೊಡನೆ ಮಾತನಾಡಿದ್ದ ನಟಿ ನಿವೇದಿತಾ ಗಾಂಜಾ ಗಿಡವನ್ನು ತುಳಸಿಗೆ ಹೋಲಿಸಿದ್ದರು. ಅಷ್ಟೇ ಅಲ್ಲದೆ ಗಾಂಜಾ ‘ಮಹಿಮೆ’ಯನ್ನು ಕೊಂಡಾಗಿದ್ದಾರೆ. ಸನಾತನ ಧರ್ಮದಲ್ಲಿ ಗಾಂಜಾ ಗೆ ವಿಶೇಷ ಸ್ಥಾನವಿದೆ. ಆಯುರ್ವೇಧ ಮಾತ್ರವಲ್ಲದೆ ಅಲೋಪತಿಯಲ್ಲೂ ಸಹ ಗಾಂಜಾವನ್ನು ಬಳಸಲಾಗುತ್ತದೆ ಎಂದು ನಟಿ ನಿವೇದಿತಾ ಹೇಳಿದ್ದಾರೆ.

ಕೊಕೇನ್, ಹೆರಾಯಿನ್ ಜೊತೆಗೆ ಗಾಂಜಾವನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿಬಿಟ್ಟಿದ್ದಾರೆ. ಸನಾತನ ಧರ್ಮದ ಬಗ್ಗೆ ಅದರ ಆಚರಣೆಗಳ ಬಗ್ಗೆ ಕಾಳಜಿಯುಳ್ಳ ನನಗೆ ಇದನ್ನು ನೋಡಿ ಬಹುಬೇಸರವಾಗಿದೆ. ಸನಾತನ ಧರ್ಮದಲ್ಲಿ ಗಾಂಜಾಕ್ಕೆ ತನ್ನದೇ ಆದ ಸ್ಥಾನವಿದೆ. ಔಷಧೀಯಗುಣವುಳ್ಳ ದೇವಸಸ್ಯವೊಂದನ್ನು ಸಿಂಥೆಟಿಕ್ ಡ್ರಗ್ಸ್ ಜೊತೆಗೆ ಹೋಲಿಕೆ ಮಾಡುತ್ತಿರುವುದು ಧರ್ಮಕ್ಕೆ ಅದರ ಸನಾತನೆಗೆ ಮಾಡುವ ಅಪಚಾರ ಎಂದಿದ್ದರು ನಟಿ ನಿವೇದಿತಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top