fbpx
ಸಮಾಚಾರ

ಡ್ರ*ಗ್ಸ್ ಮಾಫಿಯಾ: ನಟಿ ರಾಗಿಣಿ ಸಿಸಿಬಿ ಪೊಲೀಸರ ವಶಕ್ಕೆ

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ಶುಕ್ರವಾರ (ಸೆಪ್ಟೆಂಬರ್ 4, 2020) ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.

ನಟಿ ರಾಗಿಣಿ ದ್ವಿವೇದಿ ಮನೆಯಲ್ಲಿ ಸಿಸಿಬಿ ಅಧಿಕಾರಿಗಳ ತಪಾಸಣೆ ಮುಗಿದಿದ್ದು ರಾಗಿಣಿಯನ್ನ ಅವರ ಮನೆಯಿಂದ ಚಾಮಾರಾಜಪೇಟೆ ಸಿಸಿಬಿ ಕಚೇರಿಗೆ ಕರೆತರಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ರಾಗಿಣಿ ಬಳಿ ಇರುವ ನಾಲ್ಕು ಮೊಬೈಲ್​​ಗಳನ್ನ ಜಪ್ತಿ ಮಾಡಲಾಗಿದೆ. ಅದರಲ್ಲಿರುವ ಎಲ್ಲಾ ಮೆಸೇಜ್​ಗಳು ಡಿಲೀಟ್​ ಆಗಿವೆ ಎನ್ನಲಾಗಿದೆ. ಹೀಗಾಗಿ ಮಾಹಿತಿಯನ್ನ ಮರಳಿ ಪಡೆಯಲು ಮಡಿವಾಳದ ಎಫ್​​ಎಸ್​​ಎಲ್ ಗೆ ಮೊಬೈಲ್​ಗಳನ್ನು ರವಾನೆ ಮಾಡಲು ಸಿಸಿಬಿ ನಿರ್ಧಾರ ಮಾಡಿದೆ ಅಂತ ತಿಳಿದುಬಂದಿದೆ.

ಇನ್ನು ಡ್ರಗ್ಸ್​ ಜಾಲದ ನಂಟು ಹೊಂದುರು ಆರೋಪ ಇರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇಣಿಗೆ ನೋಟಿಸ್​ ನೀಡಿದ್ದರು. ಆದರೆ, ರಾಗಿಣಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್​ ಇಲಾಖೆಯ ನಾರ್ಕೋಟಿಸ್​ ವಿಭಾಗದ ಅಧಿಕಾರಿಗಳು ಇಂದು ಮುಂಜಾನೆಯೇ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಎರಡು ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top