fbpx
ಸಮಾಚಾರ

ಆ ವಸ್ತುಗೆ ‘ಚಿಕ್ಕನ್ ಪೀಸ್’ ಎನ್ನುತ್ತಿದ್ದ ರಾಗಿಣಿ – ತುಪ್ಪದ ಹುಡ್ಗಿಯ ವಿಭಿನ್ನ ಕೋಡ್‍ವರ್ಡ್ ಗಳು ರೀವಿಲ್

ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಕೇಸಿನಲ್ಲಿ ಸಿಕ್ಕಿಬಿದ್ದಿರುವ ನಟಿ ರಾಗಿಣಿಯವರು ಡ್ರಗ್ಸ್ ವಿಚಾರದಲ್ಲಿ ಕೋಡ್‍ವರ್ಡ್‍ಗಳನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.

ಖಡಕ್​ ಅಧಿಕಾರಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ CCB ಅಧಿಕಾರಿಗಳು ಗಂಧದಗುಡಿಯಲ್ಲಿ ದುರ್ಗಂಧ ಪ್ರಕರಣದಲ್ಲಿ ಮಟ್ಟಸವಾಗಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆ ನಿನ್ನೆ ರಾತ್ರಿಯೆಲ್ಲ ಅವರು ಪ್ರಮುಖ ಆರೋಪಿ ರವಿಶಂಕರ್​ ಮೇಲೆ ವರ್ಕೌಟ್​ ಮಾಡುತ್ತಾ ಅವನ ಬಾಯಿಬಿಡಿಸ್ತಿದ್ರೆ ಮತ್ತೊಂದು ಕತೆ ಡ್ರಗ್ಸ್ ಮಾಫಿಯಾ ಆರೋಪದ ಮೇಲೆ ನಟಿ ರಾಗಿಣಿಯನ್ನು ವಶಕ್ಕೆ ಪಡೆದಿದ್ದಾರೆ.

ರಾಗಿಣಿ ಮತ್ತು ಅವರ ಅಪ್ತ ರವಿಶಂಕರ್ ಕೋಡ್‍ವರ್ಡ್ ಉಪಯೋಗಿಸಿಕೊಂಡು ಡ್ರಗ್ ವಿಚಾರದ ಬಗ್ಗೆ ಚಾಟ್ ಮಾಡುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಚಾಟ್ ವೇಳೆ ತಮ್‍ಸಪ್ ಸಿಂಬಲ್ ಸೆಂಡ್ ಮಾಡಿದ್ರೆ ಇವತ್ತು ಡ್ರಗ್ ಬೇಕು ಎಂದು, ಸ್ಟಾರ್ ಇಮೋಜಿ ಕಳುಹಿಸಿದರೆ ಫ್ಲಾಟ್‍ಗೆ ಬರಬೇಕು ಎಂದು ಅರ್ಥ. ಏರೋಪ್ಲೇನ್ ಸಿಂಬಲ್ ಕಳುಹಿಸಿದರೆ ಊರಿಂದ ಹೊರಗಡೆ ಹೋಗುವುದು ಎಂಬಂತೆ ಕೋಡ್‍ವರ್ಡ್ ಸೆಟ್ ಮಾಡಿಕೊಂಡಿದ್ದಾರೆ.

ಅಂತಯೇ ರವಿಶಂಕರ್ 3 ಚಿಕನ್ ಪೀಸ್, 1 ಕಾಲಿ ಫ್ಲವರ್ ಕಳುಹಿಸಿದರೆ ಕೊಕೈನ್ ಎಂಡಿಎಂಎ, ಎಲ್‍ಎಸ್‍ಡಿ ರೆಡಿ ಇದೆ ಎಂಬ ಅರ್ಥವನ್ನು ಸೂಚಿಸುತ್ತದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ರೀತಿಯ ಚಾಟ್‍ಗಳು ಪೊಲೀಸರು ವಶಕ್ಕೆ ಪಡೆದಿರುವ ರವಿಶಂಕರ್ ಮತ್ತು ರಾಗಿಣಿ ಮೊಬೈಲ್‍ನಲ್ಲಿ ಸಿಕ್ಕಿವೆ. ಜೊತೆಗೆ ಇದೇ ರೀತಿಯ ಕೋಡ್‍ವರ್ಡ್‍ಗಳನ್ನು ಬಳಸುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top