fbpx
ಸಮಾಚಾರ

ಬಿಜೆಪಿ ತಾರಾ ಪ್ರಚಾರಕಿಯಾಗಿದ್ದ ರಾಗಿಣಿ: ಸಿಎಂ ಪುತ್ರ ವಿಜಯೇಂದ್ರಗೆ ಇರುಸು ಮುರುಸು; ಬಂಧನದ ಬೆನ್ನಲ್ಲೇ ಫೋಟೊ, ವಿಡಿಯೊ ವೈರಲ್

ಬೃಹತ್ ಡ್ರಗ್ಸ್ ಮಾಫಿಯಾ ದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ವಶದಲ್ಲಿರುವ ಚಿತ್ರನಟಿ ರಾಗಿಣಿ ದ್ವಿವೇದ ಬೆಂಗಳೂರಿನ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ರಾತ್ರಿ ಕಳೆದಿದ್ದಾರೆ.

ಇದರ ಬೆನ್ನಲ್ಲೇ 2019ರ‌ ಉಪ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಜತೆ ಪ್ರಚಾರಕಿಯಾಗಿದ್ದ ರಾಗಿಣಿ ಅವರ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಗಿಣಿ, ಬಂಧನವಾಗುತ್ತಿದ್ದಂತೆಯೇ, ರಾಗಿಣಿಗೆ ಬಿಜೆಪಿಯ ನಂಟು ಎಂದು ವಿಡಿಯೋ, ಫೋಟೋಗಳು, ಸಾಮಾಜಿಕ ತಾಣದಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ.

 

 

ಸಚಿವ ಕೆ.ಸಿ.ನಾರಾಯಣ ಗೌಡ 2019ರಲ್ಲಿ ನಡೆದ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆಗ ರಾಗಿಣಿ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಬಿಜೆಪಿ ಪರ ಪ್ರಚಾರ ಮಾಡಿದ್ದರು.

 

 

ಬಿಜೆಪಿಯ ಸ್ಟಾರ್ ಪ್ರಚಾರಕಿ ರಾಗಿಣಿ ದ್ವಿವೇದಿ ಆಗಿದ್ದರಿಂದ, ರಾಗಿಣಿ ಬಂಧನ ವಿಚಾರ, ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ. ಜೊತೆಗೆ, ಸಿಎಂ ಬಿ.ವೈ.ವಿಜಯೇಂದ್ರಗೆ ಕೂಡಾ ಈ ವಿದ್ಯಮಾನ ಇರಿಸುಮುರಿಸನ್ನು ತಂದೊಡ್ಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top