fbpx
ಸಮಾಚಾರ

ಪಾರ್ಕಿನಲ್ಲೆ ಬಟ್ಟೆ ಬಿಚ್ಚಿ ಅಶ್ಲೀಲ ಡ್ಯಾನ್ಸ್: ಸಂಯುಕ್ತಾ ಹೆಗಡೆ ಅಸಭ್ಯ ವರ್ತನೆ ಬಗ್ಗೆ ಸಾರ್ವಜನಿಕರ ಆರೋಪ

‘ಕಿರಿಕ್ ಪಾರ್ಟಿ’ ಸಿನಿಮಾದ ಬೆಡಗಿ ಸಂಯುಕ್ತಾ ಹೆಗಡೆ ಸಿನಿಮಾ ಮಾಡಿದ್ದಕ್ಕಿಂತ ಹೆಚ್ಚಾಗಿ ವಿವಾದಗಳಿಂದಾನೇ ಸುದ್ದಿಯಾಗಿದ್ದಾರೆ. ಈಗ ಮತ್ತೊಂದು ವಿವಾದಕ್ಕೆ ಸಂಯುಕ್ತಾ ಗುರಿಯಾಗಿದ್ದಾರೆ. ಪಾರ್ಕ್‌ವೊಂದರಲ್ಲಿ ಸಂಯುಕ್ತಾ ವರ್ಕೌಟ್ ಮಾಡುತ್ತಿದ್ದರು. ಸಾರ್ವಜನಿಕ ಪಾರ್ಕ್ ನಲ್ಲಿ ತುಂಡು ಬಟ್ಟೆ ತೊಟ್ಟು ನೃತ್ಯ ಮಾಡಿದ ಕಾರಣಕ್ಕೆ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಬೆಂಗಳೂರಿನ ಅಗರ ಉದ್ಯಾನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಶುಕ್ರವಾರ ಸಂಜೆ ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್‍ನಲ್ಲಿ ಸಂಯುಕ್ತ ಹೆಗ್ಡೆ ಮತ್ತವರ ಸಂಗಡಿಗರು ‘ಹುಲಾ ಹೂಪ್ ಡ್ಯಾನ್ಸ್’ ಮಾಡುತ್ತಿದ್ದರು. ಇದಕ್ಕೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದು ನಮ್ಮದು ಏನು ತಪ್ಪಿಲ್ಲ, ನೀವೇ ನೋಡಿ ಎನ್ನುತ್ತ ತಾವು ಧರಿಸಿದ್ದ ಮೇಲಂಗಿ ತೆಗೆದು ನಾವು ತುಂಡು ಬಟ್ಟೆ ಧರಿಸಿಲ್ಲ ಎಂದು ಸಾಕ್ಷ್ಯ ನೀಡಿದ್ದಾರೆ.

ಅವರ ಮಾಡಿರುವ ಲೈವ್​ ನೋಡಿದರೆ, ಅಲ್ಲೇ ಇದ್ದ ಮಹಿಳೆ ಹಾಗೂ ಕೆಲವರು ಸಂಯುಕ್ತಾ ಹಾಗೂ ಅವರೊಂದಿಗಿದ್ದ ಹುಡುಗಿಯರ ಮೇಲೆ ಹಲ್ಲೆಗೆ ಮುಂದಾಗಿರುವುದು ತಿಳಿಯುತ್ತದೆ. ಸಾಲದಕ್ಕೆ ಅವರನ್ನು ಉದ್ಯಾನದಲ್ಲೇ ಲಾಕ್​ ಮಾಡುತ್ತಾರೆ.

ಸಂಯುಕ್ತಾ ಹೆಗಡೆ ಹಾಗೂ ಅವರ ಸ್ನೇಹಿತೆಯರು ಹುಲಾ ಹೂಪ್​ ಮಾಡುತ್ತಾ ಉದ್ಯಾನದಲ್ಲಿರುತ್ತಾರೆ. ಆಗ ಅಲ್ಲೇ ಇದ್ದ ಕವಿತಾ ರೆಡ್ಡಿ ಎಂಬುವರು ಮೊದಲು ಸಂಯುಕ್ತಾ ಹಾಗೂ ಅವರ ಸ್ನೇಹಿತೆಯರ ವಿಡಿಯೋ ಮಾಡಲಾರಂಭಿಸಿ, ಅವರನ್ನು ನಿಂದಿಸುತ್ತಿರುತ್ತಾರೆ.

ಸ್ಟೋರ್ಟ್ಸ್​ವೇರ್​ ತೊಟ್ಟು ವರ್ಕೌಟ್ ಮಾಡುತ್ತಿರುವ ಸಂಯುಕ್ತಾರನ್ನು ಅಸಭ್ಯ ಉಡುಗೆ ತೊಟ್ಟು, ಕೆಟ್ಟದಾಗಿ ವರ್ತನೆ ಮಾಡುತ್ತಿರುವುದಾಗಿ ಕವಿತಾ ರೆಡ್ಡಿ ಆರೋಪಿಸುತ್ತಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಸಂಯುಕ್ತಾ ಅವರೊಂದಿಗಿರುವ ಹುಡುಗಿಯ ಮೇಲೆ ಕವಿತಾ ರೆಡ್ಡಿ ಎಂದು ಹೇಳಲಾಗುತ್ತಿರುವ ಮಹಿಳೆ ಹಲ್ಲೆ ಆಡಲು ಯತ್ನಿಸುತ್ತಾರೆ. ಸಂಯುಕ್ತಾ ತಮ್ಮ ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top