fbpx
ಸಮಾಚಾರ

ಅಂಬೇಡ್ಕರ್ ಜೀವನಾಧಾರಿತ ‘ಮಹಾನಾಯಕ’ ಧಾರಾವಾಹಿ ನಿಲ್ಲಿಸುವಂತೆ ಚಾನೆಲ್ ಮುಖ್ಯಸ್ಥರಿಗೆ ಜೀವ ಬೆದರಿಕೆ ಕರೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜೀವನಗಾಥೆ ಸಾರುವ ‘ಮಹಾನಾಯಕ’ ಧಾರಾವಾಹಿಯ ಸ್ಥಗಿತಕ್ಕೆ ಆಗ್ರಹಿಸಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ವಾಹಿನಿಯ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಟ್ವೀಟ್‌ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಮಹಾನಾಯಕ’ ಧಾರಾವಾಹಿ ನಿಲ್ಲಿಸುವಂತೆ ಸಾಕಷ್ಟು ಮೆಸೇಜ್, ಮಧ್ಯರಾತ್ರಿ ಕರೆ ಬರುತ್ತಿದೆ. ಇದು ಬೆದರಿಕೆಯಂತೆ ಕಾಣುತ್ತಿದೆ. ಇದರ ಬಗ್ಗೆ ನಾವು ಕೇರ್ ಮಾಡಲಾರುವುದಿಲ್ಲ. ‘ಮಹಾನಾಯಕ’ ಧಾರಾವಾಹಿ ಮುಂದುವರೆಯುತ್ತದೆ. ಇದು ನಮ್ಮ ಹೆಮ್ಮೆ, ವೈಯಕ್ತಿಕವಾಗಿ ಈ ಸೀರಿಯಲ್ ಬಗ್ಗೆ ನನಗೆ ಪ್ರೀತಿಯಿದೆ. ನಿಜಕ್ಕೂ ಸಮಾಜದಲ್ಲಿ ಇದು ಸಮಸ್ಯೆ ಎಂದು ತಿಳಿದುಕೊಂಡರೆ, ಸಮಾಜಕ್ಕೆ ನೀವೇ ಸಮಸ್ಯೆ’ ಎಂದು ಜೀ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

 

 

ಮುಂಜಾಗ್ರತೆಯಾಗಿ ಅಶೋಕನಗರ ಪೊಲೀಸ್‌ ಠಾಣೆಗೆ ವಾಹಿನಿಯು ಈ ಬಗ್ಗೆ ಮಾಹಿತಿ ನೀಡಿದೆ. ಜೊತೆಗೆ, ಬೆದರಿಕೆಗೆ ಸಂಬಂಧಪಟ್ಟ ದಾಖಲೆಯನ್ನೂ ಸಲ್ಲಿಸಿದೆ. ಆದರೆ, ಯಾವುದೇ ದೂರು ದಾಖಲಾಗಿಲ್ಲ.

ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೆ ಸಾಕಷ್ಟು ಜನರು ಬೆಂಬಲಕ್ಕೆ ನಿಂತಿದ್ದಾರೆ.”ಎಲ್ಲರೂ ರಾಘವೇಂದ್ರ ಹುಣಸೂರು ಸರ್ ಜೊತೆಗೆ ನಿಲ್ಲೋಣ, ಸರ್ ನಿಮ್ಮಜೊತೆ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ನಾವಿದ್ದೀವಿ ಹೆದರದೆ, ಕುಗ್ಗದೆ ಮಹಾನಾಯಕ ಧಾರಾವಾಹಿಯನ್ನು ಪ್ರಸಾರ ಮಾಡಿ ಸರ್ ‘ಎಂದು ನೆಟ್ಟಿಗರು ಪ್ರತಿಕ್ರಿಯಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top