fbpx
ಸಮಾಚಾರ

ಅನೂಪ್‌– ಸುದೀಪ್‌ ಜೋಡಿಯಿಂದ ಹೊಸ ಸಿನಿಮಾ ಘೋಷಣೆ: ‘ಫ್ಯಾಂಟಮ್’ ಬಳಿಕ ‘ಅಶ್ವತ್ಥಾಮ’ನ ಕರೆತರಲಿದ್ದಾರೆ ಕಿಚ್ಚ

ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಷನ್​ನಲ್ಲಿ ಫ್ಯಾಂಟಮ್ ಸಿನಿಮಾ ಸಿದ್ಧವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಭಾರಿ ಬಜೆಟ್​ನ ಈ ಸಿನಿಮಾ ಹೈದರಾಬಾದ್​ನಲ್ಲಿ ದೃಶ್ಯರೂಪ ಪಡೆದುಕೊಳ್ಳುತ್ತಿದೆ. ದಿನಂಪ್ರತಿ ಒಂದಲ್ಲಾ ಒಂದು ಕಾರಣಗಳಿಗೆ ಸುದ್ದಿ ಮಾಡುತ್ತಲೇ ಇದೆ ಫ್ಯಾಂಟಮ್. ಹೀಗಿರುವಾಗಲೇ ಕಿಚ್ಚ ಹಾಗೂ ಅನುಪ್ ಕಾಂಬಿನೇಷನ್ ಮತ್ತೊಂದು ಬ್ಲಾಸ್ಟಿಂಗ್ ನ್ಯೂಸ್ ಕೊಟ್ಟಿದೆ.

‘ಫ್ಯಾಂಟಮ್’ ಚಿತ್ರದ ನಂತರ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್‌ ಕಾಂಬಿನೇಷನ್‌ನಡಿ ಮೂಡಿ ಬರಲಿರುವ ಮತ್ತೊಂದು ಬಹುನಿರೀಕ್ಷೆಯ ಚಿತ್ರದ ಟೈಟಲ್‌ ಹೊರಬಿದ್ದಿದೆ. ಫ್ಯಾಂಟಮ್‌ ನಂತರ ಅನೂಪ್‌ ‘ಅಶ್ವತ್ಥಾಮ’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರ “ಕಿಚ್ಚ ಕ್ರಿಯೇಷನ್ಸ್” ಸಂಸ್ಥೆಯಡಿ ನಿರ್ಮಾಣವಾಗಲಿದೆ.

 

 

ಈ ಸಿನಿಮಾ ಮಹಾಭಾರತದಲ್ಲಿರುವ ಅಶ್ವತ್ಥಾಮನ ಕುರಿತು ಕಥೆನಾ ಅಥವಾ ಅಶ್ವತ್ಥಾಮ ವ್ಯಕ್ತಿತ್ವವುಳ್ಳ ವ್ಯಕ್ತಿಯ ಕಥೆನಾ ಎಂಬ ಕುತೂಹಲ ಕಾಡ್ತಿದೆ. ಏಕಂದ್ರೆ, ಪೋಸ್ಟರ್‌ನಲ್ಲಿ ಬಿಲ್ಲು ಹಿಡಿದಿರುವ ಅಶ್ವತ್ಥಾಮನೂ ಇದ್ದಾನೆ, ಗನ್ ಹಿಡಿದಿರುವ ವ್ಯಕ್ತಿನೂ ಇದ್ದಾನೆ.

ಹೆಸರು: ಅಶ್ವತ್ಥಾಮ
ತಂದೆಯ ಹೆಸರು: ದ್ರೋಣಾಚಾರ್ಯ
ವಯಸ್ಸು: 5200 ವರ್ಷ
ಮಿಷನ್‌: ಲೋಡಿಂಗ್‌….
ಎಂದು ಪೋಸ್ಟರ್ ಮೇಲೆ ಬರೆದಿರುವ ಈ ಅಡಿ ಟಿಪ್ಪಣಿಯೂ ಗಮನ ಸೆಳೆಯುವಂತಿದೆ.

 

 

ಅಂದ್ಹಾಗೆ, ಸುದೀಪ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಯಕ ಯಾರು ಎಂದು ಇನ್ನು ಅಂತಿಮವಾಗಿಲ್ಲ. ಹೀರೋ ಸೇರಿದಂತೆ ಉಳಿದ ಯಾವ ಕಲಾವಿದರು ಸಹ ಆಯ್ಕೆಯಾಗಿಲ್ಲ. ಕಿಚ್ಚನ ಬ್ಯಾನರ್‌ನಡಿ ನಿರ್ಮಾಣವಾಗಲಿರುವ ಈ ಚಿತ್ರ ಕೂಡ ಬಿಗ್‌ ಬಜೆಟ್‌ ಸಿನಿಮಾ ಆಗಲಿದ್ದು, ‘ಅಶ್ವತ್ಥಾಮ’ನಾಗಿ ಸುದೀಪ್‌ ಅವರನ್ನೇ ನೋಡಬಹುದೆನ್ನುವ ಲೆಕ್ಕಾಚಾರದಲ್ಲಿ ಸಿನಿಪ್ರಿಯರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top