fbpx
ಸಮಾಚಾರ

“ನನಗಿನ್ನೂ ಮದುವೆ ಆಗಿಲ್ಲ, ಪ್ರಶಾಂತ್​ ಸಂಭರ್ಗಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ” ಗಳಗಳನೇ ಅತ್ತ ನಟಿ ಸಂಜನಾ ಗಲ್ರಾನಿ!

ಡ್ರಗ್ಸ್​ ದಂಧೆಯಲ್ಲಿ ಸುಖಾಸುಮ್ಮನೆ ನನ್ನ ಹೆಸರು ತರ್ತಿದ್ದಾರೆ. ಕೆಲವರ ಹೇಳಿಕೆಯಿಂದ ನಮ್ಮ ತಾಯಿ ಹೃದಯ ವೀಕ್​ ಆಗಿದೆ. ನಾನು ಒಬ್ಬ ಹೆಣ್ಣು ಮಗಳು, ನನ್ನ ಚಾರಿತ್ರ್ಯವಧೆ ಮಾಡಬೇಡಿ ಎಂದು ಮಾಧ್ಯಮಗಳ ಮುಂದೆ ನಟಿ ಸಂಜನಾ ಗಳಗಳನೇ ಕಣ್ಣೀರಿಟ್ಟಿದ್ದಾರೆ.

ಪ್ರಶಾಂತ್ ಸಂಬರಗಿ ಅವರ ವಿರುದ್ಧ ಸಂಜನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಸಂಬರಗಿ ನನ್ನನ್ನು ಚಿಯರ್ ಗರ್ಲ್ ಅಂದಿದ್ದಾನೆ. ಅವನಿಗೆ ನಾನು ಚಪ್ಪಲಿಯಲ್ಲಿ ಹೊಡೆಯುತ್ತೇನೆ. ‘ಪ್ರಶಾಂತ್ ಸಂಬರಗಿ ಬೀದಿ ನಾಯಿ’ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇಷ್ಟು ದಿನಗಳ ಕಾಲ ಪ್ರಶಾಂತ್ ಸಂಬರಗಿ ಎಲ್ಲಿದ್ದರು. ಈಗ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಏಕೆ ಆರೋಪ ಮಾಡಿರಲಿಲ್ಲ ಎಂದು ಪ್ರಶಾಂತ್ ಸಂಬರಗಿಗೆ ನಟಿ ಸಂಜನಾ ಗಲ್ರಾನಿ ಪ್ರಶ್ನಿಸಿದ್ದಾರೆ.

ನಮ್ಮ ಅಮ್ಮನ ಹಾರ್ಟ್ ವೀಕ್, ಈಗಾಗಲೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಶಾಂತ್ ಸಂಬರಗಿ ಇನ್ನಾ ಮಾತನಾಡಿ ನಮ್ಮ ಅಮ್ಮಗೆ ಏನಾದರೂ ಆದರೆ ನಾನು ಸತ್ತೋದರೂ ಅವನನ್ನು ನಾನು ಬಿಡಲ್ಲ ಎಂದು ನಟಿ ಸಂಜನಾ ಕಣ್ಣೀರು ಹಾಕಿದ್ದಾರೆ.

ಕ್ಯಾಸಿನೋ ಕಾರ್ಯಕ್ರಮಕ್ಕೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ವಿವೇಕ್ ಒಬೇರಾಯ್ ನನ್ನ ಪಕ್ಕ ನಿಂತಿದ್ದರು, ಉಪೇಂದ್ರ ಸಹ ಭಾಗವಹಿಸಿದ್ದರು. ಎಲ್ಲಾ ರಾಜ್ಯಗಳಿಂದ 200 ಜನ ಪ್ರತಿನಿಧಿಸಿದ್ದರು. ಹೀಗಾಗಿ ಊಹಾಪೋಹಾಗಳನ್ನು ಮಾತನಾಡಬೇಡಿ. ನಮ್ಮ ಅಮ್ಮಗೆ ಎದೆ ನೋವು ಕಾಣಿಸಿಕೊಂಡಿದೆ. ಅವರಿಗೆ ಏನಾದರೂ ಆದರೆ ನಾನು ಬಿಡಲ್ಲ. ನಾನು ಒಂದು ಹೆಣ್ಣು, ನನಗೆ ಇನ್ನೂ ಮದುವೆಯಾಗಿಲ್ಲ. ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಅವರು ಯಾರು ಎಂದು ಪ್ರಶ್ನಿಸಿ ಸಂಜನಾ ಆಕ್ರೋಶ ಹೊರ ಹಾಕಿದರು.

ಸಿಸಿಬಿಯವರು ಬಂಧಿಸಿರುವ ರಾಹುಲ್ ಹೊರಬಂದ್ರೆ ಸಾಕು. ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದರೆ ನಾನು ಹೋಗ್ತೇನೆ. ನಾನು ವಕೀಲರನ್ನ ಕಳಿಸಲ್ಲ, ನಾನೇ ಖುದ್ದಾಗಿ ಹೋಗ್ತೀನಿ ಎಂದೂ ಬೆಂಗಳೂರಿನಲ್ಲಿ ನಟಿ ಸಂಜನಾ ಗಲ್ರಾನಿ ತಿಳಿಸಿದ್ದಾರೆ.

‘ನಾನು ಸ್ವಂತ ಸ್ಟ್ರಗಲ್ ಮಾಡಿ ಈ ಮಟ್ಟಕ್ಕೆ ಬಂದಿದ್ದೀನಿ. ಜಮೀರ್ ಅಹ್ಮದ್ ಅವರಲ್ಲಿ ನನ್ನದೊಂದು ಮನವಿ, ಪ್ರಶಾಂತ್ ಸಂಬರಗಿಯನ್ನು ಸುಮ್ಮನೆ ಬಿಡಬೇಡಿ. ಅವನಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಪಬ್ಲಿಸಿಟಿಗೋಸ್ಕರ ಹೀಗೆಲ್ಲಾ ಮಾಡ್ತಿದಾನೆ. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ನನ್ನನ್ನ ಸುಮ್ಮನೆ ಟಾರ್ಗೆಟ್​ ಮಾಡ್ತಿದ್ದಾನೆ. ಸುದ್ದಿಯಲ್ಲಿರೋರನ್ನ ಬಳಸಿಕೊಂಡು ಗಿಮಿಕ್ ಮಾಡ್ತಿದ್ದಾನೆ. ನಾನೇನೂ ತಪ್ಪು ಮಾಡಿಲ್ಲ. ಈ ಪ್ರಕರಣಕ್ಕೂ ನನಗೆ ಸಂಬಂಧನೇ ಇಲ್ಲ. ನನ್ನ ಹೆಸರೂ ಎಫ್ಐಆರ್​​ನಲ್ಲಿ ಇಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಿ’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top