fbpx
ಸಮಾಚಾರ

ದಲಿತ ಯುವಕನಿಗೆ ಥಳಿಸಿದ್ದ ನಟ, ಬಿಗ್‌ಬಾಸ್ ಸ್ಪರ್ಧಿ ಉಡುಪಿಯಲ್ಲಿ ಅರೆಸ್ಟ್

ತೆಲುಗು ಬಿಗ್‌ಬಾಸ್ ಸ್ಪರ್ಧಿ, ನಟ, ಸಿನಿಮಾ ನಿರ್ಮಾಪಕ ನೂತನ್ ನಾಯ್ಡುವನ್ನು ಉಡುಪಿ ಪೊಲೀಸರು ನಗರದ ಇಂದ್ರಾಳಿ ರೈಲ್ವೆ ಸ್ಟೇಶನ್‌ ಬಳಿ ಬಂಧಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ಚಿತ್ರ ನಿರ್ಮಾಪಕ, ತೆಲುಗು ಬಿಗ್‍ಬಾಸ್ ಸ್ಪರ್ಧಿ ಆರೋಪಿ ನೂತನ್ ನಾಯ್ಡುನನ್ನು ಉಡುಪಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ, ವಿಶಾಖಪಟ್ಟಣ ಪೊಲೀಸರಿಂದ ಶನಿವಾರ ಬೆಳಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಪೊಲೀಸರು ಆರೋಪಿಯನ್ನು ರೈಲ್ಲೇ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.

ಆರೋಪಿ ನೂತನ್ ಬಳಿಯಿಂದ ನಾಲ್ಕು ಮೊಬೈಲ್ ಫೋನ್‍ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು ಗಂಟೆ ಬಳಿಕ ಆರೋಪಿ ನೂತನ್‍ನ್ನು ವಿಶಾಖಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡರು. ವಿಶಾಖಪಟ್ಟಣ ಪೊಲೀಸರು ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಶಾಖಪಟ್ಟಣಕ್ಕೆ ಕರೆದೊಯ್ದಿದ್ದಾರೆ.

 

 

ಏನಿದು ಪ್ರಕರಣ:
ನೂತನ್ ನಾಯ್ಡು, ಪರ್ರಿ ಶ್ರೀಕಾಂತ್ ಹೆಸರಿನ 20 ವರ್ಷದ ದಲಿತ ಯುವಕನ ಮೇಲೆ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದಾನೆ. ದಲಿತ ಯುವಕ ಮೇಲೆ ದೌರ್ಜನ್ಯ ಎಸಗಿ, ಆತನ ತಲೆ ಬೋಳಿಸಿದ್ದರು. ಏಳೂ ಮಂದಿಯನ್ನು ಪೊಲೀಸರು ಬಂಧಿಸಿದ್ದು, ನೂತನ್‌ಗಾಗಿ ಹುಡುಕಾಟ ನಡೆಸುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top