fbpx
ಸಮಾಚಾರ

ಬರೋಬ್ಬರಿ 1,650 ಎಕರೆ ಅರಣ್ಯವನ್ನು ದತ್ತು ಪಡೆದ ನಟ ಪ್ರಭಾಸ್

ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್‍ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಅದೇ ರೀತಿ ಸಹಾಯ ಮಾಡುವ ತಮ್ಮ ಮನೋಭಾವದಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ತಮ್ಮ ಜಿಮ್ ಟ್ರೇನರ್‌ಗೆ ಭರ್ಜರಿ ಉಡುಗೊರೆ ನೀಡಿದ್ದರು. ಇದೀಗ ಅರಣ್ಯವನ್ನೇ ದತ್ತು ಪಡೆದುಕೊಂಡಿದ್ದಾರೆ.

ದುಂಡಿಗಲ್‌ನ ಹೊರ ರಿಂಗ್ ರೋಡ್‌ನಲ್ಲಿರುವ ಕಾಝಿಪಳ್ಳಿ ಮೀಸಲು ಅರಣ್ಯದ ಅಭಿವೃದ್ಧಿಗಾಗಿ 2 ಕೋಟಿ ರೈಪಾಯಿಯ ಚೆಕ್‌ನ್ನು ಪ್ರಭಾಸ್ ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ. ರಾಜ್ಯಸಭಾ ಸಂಸದ ಜೋಗಿನಪಳ್ಳಿ ಸಂತೋಷ್ ಕುಮಾರ್ ಹಾಗೂ ಅಣ್ಯ ಸಚಿವ ಅಲ್ಲೋಲ ಇಂದ್ರಕರಣ್ ರೆಡ್ಡಿ ಉಪಸ್ಥಿತರಿದ್ದರು. ರಾಜಕೀಯ ಮುಖಂಡರ ಜೊತೆ ನಗರ ಅರಣ್ಯ ಉದ್ಯಾನಕ್ಕಾಗಿ ಪ್ರಭಾಸ್ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಭಾಸ್ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಜೋಗಿನಪಲ್ಲಿ, ತೆಲಂಗಾಣ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಗ್ರೀನ್ ಇಂಡಿಯಾ ಚಾಲೆಂಜ್ ಎಂಬ ಹ್ಯಾಷ್​​​ಟ್ಯಾಗ್ ಮೂಲಕ ಜನರಿಗೂ ಸಸಿ ನೆಡುವ, ಹಸಿರು ಸಂರಕ್ಷಿಸುವ ಸವಾಲು ಹಾಕಿದ್ದಾರೆ ಯಂಗ್ ರೆಬೆಲ್ ಸ್ಟಾರ್.

ಹಾಗಂತ ಪ್ರಭಾಸ್ ಸಹಾಯಹಸ್ತ ಚಾಚಿರುವುದು ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದಷ್ಟೇ ಕೊರೋನಾ ಸಮಯದಲ್ಲೂ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಪ್ರಭಾಸ್ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಪ್ರಧಾನಮಂತ್ರಿ ನ್ಯಾಷನಲ್ ರಿಲೀಫ್ ಫಂಡ್​​ಗೆ 3 ಕೋಟಿ ರೂಪಾಯಿ ಹಾಗೂ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯ ಸರ್ಕಾರಗಳಿಗೆ ತಲಾ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.

ಸ್ವತಃ ಪರಿಸರ ಪ್ರೇಮಿಯಾಗಿರುವ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಈ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ಶ್ರೀಮಂತರು, ನಟನಟಿಯರು, ಪ್ರಭಾವಿಗಳು ಮತ್ತು ಆಸಕ್ತರು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಾಕಲಾಗಿರುವ ವನ್ಯ ಜೀವಿಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಆ ಪ್ರಾಣಿಗಳ ನಿರ್ವಹಣೆಗೆ ಒಂದಿಷ್ಟು ಹಣಕಾಸಿನ ಸಹಾಯ ಮಾಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top