fbpx
ಸಮಾಚಾರ

“ಉಪ್ಪು ತಿಂದವರು ನೀರು ಕುಡಿಯಲೇಕು, ಇದು ಇಷ್ಟಕ್ಕೆ ಮುಗಿಯಲ್ಲ”

ಕನ್ನಡ ಚಿತ್ರರಂಗಕ್ಕೂ ಡ್ರಗ್ಸ್‌ ಮಾಫಿಯಾಗೂ ನಂಟು ಇದೆ ಎಂಬ ಆರೋಪದ ಮೇಲೆ ಹಲವರ ವಿಚಾರಣೆ ನಡೆಯುತ್ತಿದ್ದು, ಈಗ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಹೆಸರು ಕೇಳಿ ಬಂದಿದ್ದ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಸಂಜನಾಳ ಬಗ್ಗೆ ಅನೇಕ ಮಾಹಿತಿಯನ್ನೂ ಸಹ ಕಲೆ ಹಾಕಿದ್ದಾರೆ.

ಈ ಮದ್ಯೆ ಈ ಬಗ್ಗೆ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿ, ‘ಉಪ್ಪು ತಿಂದವರು ನೀರು ಕುಡಿಯಲೇಬೇಕು. ಇದು ಇಷ್ಟಕ್ಕೆ ಮುಗಿಯಲ್ಲ, ನಮ್ಮ ಕರ್ಮ ಯಾವಾಗಲೂ ನಮ್ಮ ಬೆನ್ನೇರಿ ಬರುತ್ತದೆ. ಯಾವತ್ತು ಕರ್ಮ ಆಗುತ್ತೋ ಅದನ್ನು ಸ್ವಚ್ಚಗೊಳಿಸಲು ಸಿಸಿಬಿಯವರು ಬರುತ್ತಾರೆ.’ ಎಂದು ಸಂಬರಗಿ ಹೇಳಿದ್ಧಾರೆ.

ಸಂಜನಾ ವಿರುದ್ಧ ಮಾನನಷ್ಟ ಮೊಕದ್ದಮೆ
ಇನ್ನು ಸಂಜನಾ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಉದ್ಯಮಿ ಪ್ರಶಾಂತ್​ ಸಂಬರಗಿ ನಟಿ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಲು ಮುಂದಾಗಿದ್ದಾರೆ.

‘ಹಂದಿ, ನಾಯಿ ಎಂದು ನನ್ನನ್ನು ನಿಂದಿಸಿರುವುದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನನಗೆ ಚಪ್ಪಲಿಯಿಂದ ಹೊಡೆಯುವುದಾಗಿ ಅವಹೇಳನ ಮಾಡಿರುವುದಕ್ಕೆ ಸಂಜನಾ ಗರ್ಲಾನಿ ವಿರುದ್ಧ ₹10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್‌ ಮೊಕದ್ದಮೆಯನ್ನು ಇನ್ನು ನಾಲ್ಕು ದಿನಗಳೊಳಗೆ ದಾಖಲಿಸುವೆ’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top