fbpx
ಸಮಾಚಾರ

ಗೃಹ ಪ್ರವೇಶ’ದ ಸಂಭ್ರಮದಲ್ಲಿ ಕನ್ನಡ ನಟ ಸುಂದರ್, ವೀಣಾ ಸುಂದರ್ ದಂಪತಿ!

ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಖ್ಯಾತ ತಾರಾ ದಂಪತಿಗಳಾದ ಸುಂದರ್ ಹಾಗೂ ವೀಣಾ ಸುಂದರ್ ಇತ್ತೀಚಿಗೆ ತಮ್ಮ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದಾರೆ. ಕಿರುತೆರೆಯ ಪ್ರಖ್ಯಾತ ನಿರ್ದೇಶಕರಾದ ಶ್ರುತಿ ನಾಯ್ಡು, ರಮೇಶ್ ಇಂದಿರಾ ಸೇರಿದಂತೆ ಕೆಲ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಕೋವಿಡ್ ನಿವಮಾವಳಿಗಳು ಇರುವುದರಿಂದ ಗೃಹಪ್ರವೇಶವನ್ನು ಸರಳವಾಗಿ ಮಾಡಲಾಗಿದೆ. ಗೃಹ ಪ್ರವೇಶದ ಫೋಟೋಗಳನ್ನು ಫೇಸ್‌ ಬುಕ್‌ ಖಾತೆಯಲ್ಲಿ ಅಪ್ಲೋಡ್ ಮಾಡುವ ಮೂಲಕ ಅವರ ಸಂತೋಷವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

ವೀಣಾ ಬಾಲನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸುಂದರ್ ಕೂಡ ರಂಗಭೂಮಿಯಿಂದ ಹಿನ್ನಲೆ ಹೊಂದಿದ್ದರು. ‘ಸುವ್ವಿ’ ಎಂಬ ಹೆಸರಿನಲ್ಲಿ ಇವರಿಬ್ಬರು ನಾಟಕ ತಂಡ ರಚಿಸಿದ್ದಾರೆ. ಅಮೆರಿಕಾ, ಸಿಂಗಾಪುರದಲ್ಲಿ ಇವರ ನಾಟಕಗಳು ಪ್ರದರ್ಶನವಾಗಿವೆ. ಈ ದಂಪತಿಗೆ ಅನಘ್ರ್ಯ ಹಾಗೂ ಅಭಿಜ್ಞ ಎಂಬ ಮಕ್ಕಳಿದ್ದಾರೆ. ಸುಂದರ್ ಕೇವಲ ನಟರಾಗಿ ಅಲ್ಲದೆ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top