fbpx
ಸಮಾಚಾರ

“ಪರಿಸರ ಕರಡು ನೀತಿಗೆ ಪ್ರಾದೇಶಿಕ ಭಾಷೆಯಲ್ಲಿ ಪದಗಳೇ ಇಲ್ಲ” ಎಂದ ಕೇಂದ್ರದ ವಿರುದ್ಧ ಸಂಸದ ಜಿಸಿ ಚಂದ್ರಶೇಖರ್ ಆಕ್ರೋಶ!

ಪರಿಸರ ಕರಡು ನೀತಿ ಕರಡು ನೀತಿ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೂ ಅರ್ಥವಾಗಬೇಕಾದ ಅಗತ್ಯತೆ ಇರುವುದರಿಂದ ಅದನ್ನು 8ನೇ ಪರಿಚ್ಛೇದದಡಿ ಬರುವ ಎಲ್ಲ22 ಭಾರತೀಯ ಭಾಷೆಗಳಿಗೆ ಅನುವಾದಿಸಬೇಕು ಸುಪ್ರೀಂಕೋರ್ಟ್‌ ಹೇಳಿತ್ತು. ಆದರೆ, ಕೇಂದ್ರದ ಪರಿಸರ ಇಲಾಖೆ, ಪ್ರಾದೇಶಿಕ ಭಾಷೆಗಳಲ್ಲಿ ಕರಡು ಅನುವಾದಕ್ಕೆ ಸೂಕ್ತವಾದ ಪದಗಳಿಲ್ಲ ಎಂದು ಮೊಂಡು ವಾದ ಮಾಡಿರುವುದು ಹೇಳಿರುವುದು ಭಾಷಾ ತಜ್ಞರನ್ನು ಕೆರಳಿಸಿದೆ.

ಅಷ್ಟೇ ಅಲ್ಲದೆ ಇದು ಭಾಷಾ ತಾತ್ಸಾರ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರದ ಸವಾರಿ ಎಂದು ಓದುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೂಗಿಗೆ ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ದನಿಯಾಗಿದ್ದು ಕೇಂದ್ರ ಈ ಭಾಷಾ ತಾರತಮ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

“ಪರಿಸರ ಕರಡು ನೀತಿ ಕರಡು ನೀತಿಯನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಲು ದುಬಾರಿ ವೆಚ್ಚ ತಗುಲಿತ್ತದೆ, ಅಲ್ಲದೇ ಅನುವಾದ ಮಾಡಲು ಪ್ರಾದೇಶಿಕ ಭಾಷೆಗಳಲ್ಲಿ ಸೂಕ್ತ ಪದಗಳು ಸಿಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವುದು ವಿಷಾದನೀಯ.. ಕನ್ನಡದಲ್ಲಿ ಭಾಷೆ ಇಲ್ಲ ಎಂದು ಹೇಳಿರುವುದು ಕನ್ನಡ ಭಾಷೆಗೆ ಮಾಡಿರುವುದು ಅವಮಾನ” ಎಂದು ಜಿಸಿ ಚಂದ್ರಶೇಖರ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

“ಪ್ರಾದೇಶಿಕ ಭಾಷೆಯಲ್ಲಿ ಅನುವಾದ ಮಾಡಿಸಿ ಜನಸಾಮಾನ್ಯರಿಗೆ ನೀಡಬೇಕಾಗಿರುವುದು ಸರಕಾರದ ಕರ್ತವ್ಯ. ಸಾಮಾನ್ಯ ಜನರಿಗೆ ಸರಕಾರದ ಎಲ್ಲಾವಿಚಾರಗಳು ತಿಳಿಯಬೇಕು ಎಂಬುದು ಪ್ರಜಾಪ್ರಭುತ್ವದ ಆಶಯ ಕೂಡಾ ಪರಿಸರ ವಿಷಯವನ್ನು ಅನುವಾದ ಮಾಡಲು ಬರುವುದಿಲ್ಲ ಎಂಬ ಸರಕಾರದ ವಾದ ಒಪ್ಪುವಂತದ್ದಲ್ಲ. ”

“ಕೇಂದ್ರದ ಈ ನಡೆ ಸಂವಿಧಾನ ವಿರೋಧಿಯಾಗಿದ್ದು ಭಾಷಾ ತಾತ್ಸಾರ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರದ ಸವಾರಿ ಮಾಡುತ್ತಿದೆ. ಇಷ್ಟೆಲ್ಲಾ ವಿರೋಧಗಳು ವ್ಯಕ್ತವಾಗುತ್ತಿದ್ದರೂ ಕೇಂದ್ರ ಮೊಂಡು ವಾದ ಮಾಡದೇ ಇನ್ನಾದರೂ ಎಚ್ಚೆತ್ತುಕೊಂಡು ಪ್ರಾದೇಶಿಕ ಭಾಷೆಗಳಿಗೆ ಕೊಡಬೇಕಾದ ಸ್ಥಾನಮಾನ ಮತ್ತು ಗೌರವಗಳನ್ನು ಕೊಟ್ಟು ಕಾಪಾಡಬೇಕು” ಎಂದು ಜಿಸಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top