ಭಾರತದಲ್ಲಿ ಪಬ್ಜಿ ನಿಷೇಧದ ನಂತರ, ದಕ್ಷಿಣ ಕೊರಿಯಾದ ಕಂಪನಿಯ ಘಟಕ ಪ್ಲೇಯರ್ ಅನ್ನೌನ್ಸ್ ಬ್ಯಾಟಲ್ ಗ್ರೌಂಡ್ಸ್ ಭಾರತದಲ್ಲಿ ಪಬ್ಜಿ ಮೊಬೈಲ್ ಫ್ರ್ಯಾಂಚಾಯ್ಸಿಯನ್ನು ಚಿನಾದ ಟೆನ್ಸೆಂಟ್ ಗೇಮ್ಸ್ ಗೆ ನಿಡದಿರಲು ತೀರ್ಮಾನಿಸಿದೆ. ಬದಲಿಗೆ ಪಬ್ಜಿ ಕಾರ್ಪೊರೇಷನ್ ಈಗ ದೇಶದ ಎಲ್ಲಾ ಪಬ್ಲಿಶಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.
ಪಬ್ಜಿ ಉಗಮ ಅಗಿದ್ದು ದಕ್ಷಿಣ ಕೊರಿಯಾದಲ್ಲಿ. ಪಬ್ಜಿ ಕಾರ್ಪೋರೇಷನ್ ಈ ಆಟದ ಸೃಷ್ಟಿಕರ್ತ. ಆದರೆ, ಪಬ್ ಜಿ ಈ ಮೊದಲು ಕೇವಲ ವಿಡಿಯೋ ಗೇಮ್ ಆಗಿತ್ತು. ನಂತರ ಇದನ್ನು ಪಬ್ಜಿ ಮೊಬೈಲ್ ಆಗಿ ಬದಲಾಯಿಸಿದ್ದು ಚೀನಾ ಮೂಲದ Tencent Games ಕಂಪನಿ. ಪಬ್ಜಿಗೆ ಚೀನಾ ಕಂಪೆನಿಯ ಸಹಭಾಗಿತ್ವ ಇರುವ ಕಾರಣ ಭಾರತದಲ್ಲಿ ಈ ಗೇಮ್ ಬ್ಯಾನ್ ಮಾಡಲಾಗಿದೆ. ಆದರೆ, ಈಗ ಸಂಸ್ಥೆ ಮಾಡಿದ ಮಹತ್ವದ ಬದಲಾವಣೆಯಿಂದ ಪಬ್ಜಿ ಮೇಲಿರುವ ಬ್ಯಾನ್ ತೆಗೆಯುವ ಸಾಧ್ಯತೆ ಇದೆ.
“ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಬ್ಜಿ ಕಾರ್ಪೊರೇಷನ್ ಇನ್ನು ಮುಂದೆ ಚೀನಾದ ಟೆನ್ಸೆಂಟ್ ಗೇಮ್ಸ್ ಗೆ ಭಾರತದಲ್ಲಿ ಫ್ರ್ಯಾಂಚಾಯ್ಸಿಯನ್ನು ನೀಡದಿರಲು ತೀರ್ಮಾನಿಸಿದೆ. ಬದಲಾಗಿ ಪಬ್ಜಿ ಕಾರ್ಪೊರೇಷನ್ ದೇಶದೊಳಗಿನ ಎಲ್ಲಾ ಪಬ್ಲಿಷಿಂಗ್ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತದೆ. ಕಂಪನಿಯು ತನ್ನ ದಾರಿಯನ್ನು ಅನ್ವೇಷಿಸುತ್ತಿದ್ದಂತೆ ಮುಂದಿನ ದಿನಗಳಲ್ಲಿ ಭಾರತಕ್ಕೆ ಸ್ವಂತವಾದ ಪಬ್ಜಿ ಆಟದ ಅನುಭವ ಒದಗಿಸಲಿದೆ. ಸ್ಥಳೀಯ ಮತ್ತು ಆರೋಗ್ಯಕರ ಆಟದ ವಾತಾವರಣವನ್ನು ಉಳಿಸಿಕೊಳ್ಳುವ ಮೂಲಕ ಅದನ್ನು ರೂಪಿಸಲು ಕಂಪನಿ ಬದ್ದವಾಗಿದೆ” ಪಬ್ಜಿ ಕಾರ್ಪೊರೇಷನ್ ಹೇಳಿಕೆ ವಿವರಿಸಿದೆ.
“ಭಾರತೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸುವಾಗ ಗೇಮರ್ ಗಳಿಗಾಗಿ ಮತ್ತೊಮ್ಮೆ ವಾರ್ ಫೀಲ್ಡ್ ಗೆ ಇಳಿಯಲು ಅನುವು ಮಾಡಿಕೊಡುವ ಪರಿಹಾರವನ್ನು ಕಂಡುಹಿಡಿಯಲು ಭಾರತ ಸರ್ಕಾರದೊಂದಿಗೆ ಕೈಜೋಡಿಸಲು ನಾವು ಆಶಿಸುತ್ತಿದೆ” ಎಂದು ಕಾರ್ಪೋರೇಷನ್ ಹೇಳಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
