fbpx
ಸಮಾಚಾರ

ಕಿಡಿಗೇಡಿಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಸಾಧು ಕೋಕಿಲಾ: ದೂರು ದಾಖಲು

ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನಟರ ಹೆಸರನ್ನು ಇಟ್ಟುಕೊಂಡು ಫೇಕ್ ಖಾತೆಗಳನ್ನು ತೆರೆದು ತಮ್ಮ ಬೇಳೆ ಬೇಯಿಸಿಕೊಳ್ಳುವವರ ಕೆಂಗಣ್ಣು ಇದೀಗ ನಟ ನಿರ್ದೇಶಕ ಸಾಧು ಕೋಕಿಲ ಅವರ ಮೇಲೆ ಬಿದ್ದಂತಿದೆ. ಯಾಕೆಂದರೆ ಪುಂಡರು ಸಾಧು ಅವರ ಹೆಸರಿನಲ್ಲಿ ಫೇಕ್ ಅಕೌಂಟ್’ಗಳನ್ನ ತೆರೆದು ಅವು ಸಾಧು ಅವರದ್ದೇ ಅಧಿಕೃತ ಖಾತೆ ಎಂದು ಅಭಿಮಾನಿಗಳಿಗೆ ಯಾಮಾರಿಸಿದ್ದಾರೇ..

ಸದ್ಯ ಈ ಕುರಿತು ಸಾಧುಕೋಕಿಲ ಪೊಲೀಸ್ ಠಾಣೆ ಮೆಟ್ಟಿರಿದ್ದು ತಮ್ಮ ಹೆಸರಿನಲ್ಲಿ ನಕಲಿ ಖಾತೆ ತರೆದು ಹೆಸರನ್ನು ದುರ್ಬಳಿಕೆ ಮಾಡಿಕೊಂಡಿರುವ ಪುಂಡರ ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋವನ್ನ ದುರ್ಬಳಕೆ ಮಾಡಲಾಗುತ್ತಿದೆ ಎಂದು ಕೂಡ ಸಾಧು ಆರೋಪಿಸಿದ್ದಾರೆ.

ವಿವಿಧ ಸಿನಿಮಾಗಳಲ್ಲಿ ನಟಿಸಿರುವ ತಮ್ಮ ಪಾತ್ರಗಳ ಫೋಟೋಗಳನ್ನ ತೆಗೆದುಕೊಂಡು, ಕೆಲ ಅಪರಿಚಿತರ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ಸೃಷ್ಟಿಸಿ ವಿವಿಧ ರೀತಿ ಪೋಸ್ಟ್​ ಮಾಡುತ್ತಿದ್ದಾರೆ ಎಂದು ಸಾಧು ಕೋಕಿಲಾ ಆರೋಪಿಸಿದ್ದು ಈ ಕುರಿತು ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ನಕಲಿ ಖಾತೆಗಳಿಂದ ಈ ರೀತಿ ಫೋಟೋಗಳನ್ನ ದುರುಪಯೋಗ ಮಾಡುತ್ತಿರುವುದು ತಮ್ಮ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಸಾಧುಕೋಕಿಲಾ ದೂರಿನಲ್ಲಿ‌ ಉಲ್ಲೇಖಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top