fbpx
ಸಮಾಚಾರ

ಪ್ರೇಮ್ಸ್ ಚಿತ್ರಕ್ಕೆ ತಲೆ ನೋವಾದ ರಾಗಿಣಿ ಪ್ರಕರಣ: ನಿರ್ಮಾಪಕ ಅಳಲು

ರಾಜ್ಯದಲ್ಲಿ ಡ್ರಗ್ಸ್ ಕೇಸ್ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಸಿನಿಮಾಗೆ ಬಂಡವಾಳ ಹಾಕಿದ ಕೆಲ ನಿರ್ಮಾಪಕರಿಗೆ ಟೆನ್ಷನ್ ಆರಂಭವಾಗಿದೆ.

ಡ್ರಗ್ಸ್ ಕೇಸಿನಲ್ಲಿ ರಾಗಿಣಿ ಅರೆಸ್ಟ್ ಆಗಿರುವುದರಿಂದ ನಿರ್ಮಾಪಕರೊಬ್ಬರಿಗೆ ದೊಡ್ಡ ತಲೆನೋವು ಎದುರಾಗಿದೆ. ಪ್ರೇಮ್ ಹಾಗೂ ರಾಗಿಣಿ ಅಭಿನಯದ ಸಿನಿಮಾ “ಗಾಂಧಿಗಿರಿ” ಸದ್ಯ ಶೇ.80 ಚಿತ್ರೀಕರಣ ಮುಗಿಸಿದ್ದು, ಇದೇ ತಿಂಗಳು 14ರಿಂದ ಮತ್ತೆ ಶೂಟಿಂಗ್ ಶುರುವಾಗಬೇಕಿತ್ತು. ಆದರೆ ಇದೀಗ ರಾಗಿಣಿ ಸಿಸಿಬಿ ಕಸ್ಟಡಿಯಲ್ಲಿದ್ದರಿಂದ ಚಿತ್ರತಂಡ ನಮಗೆ ರಾಗಿಣಿ ಬೇಕೇ ಬೇಕು ಎಂದು ಹಠ ಹಿಡಿದಿದೆ.

 

 

ಚಿತ್ರೀಕರಣದಲ್ಲಿ ಭಾಗವಹಿಸುವುದಾಗಿ ಹೇಳಿದ್ದ ರಾಗಿಣಿ ಈಗ ಬಂಧನದಲ್ಲಿದ್ದಾರೆ. ಹಾಗಾಗಿ, ಬಾಕಿ ಉಳಿದಿರುವ ಶೇಕಡ 20ರಷ್ಟು ಚಿತ್ರೀಕರಣವನ್ನು ಸುಸೂತ್ರವಾಗಿ ನಡೆಸಿಕೊಡಲು ಕ್ರಮವಹಿಸಬೇಕು ಎಂದು ನಿರ್ಮಾಪಕ ರಾಜೇಶ್‌ ಪಟೇಲ್‌‌ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಕೋರಿದ್ದಾರೆ.

 

 

‘ಇದೇ 14ರಿಂದ ಚಿತ್ರದ ಉಳಿದ ಭಾಗದ ಶೂಟಿಂಗ್‌ಗೆ ನಿರ್ಧರಿಸಿದ್ದೆವು. ಕಲಾವಿದರು, ತಂತ್ರಜ್ಞರು ಕೂಡ ಒಪ್ಪಿಗೆ ಸೂಚಿಸಿದ್ದರು. ಇದೀಗ ರಾಗಿಣಿಯವರ ವಿಷಯದಲ್ಲಿ ಆಗಿರುವ ಬೆಳವಣಿಗೆಯಿಂದ ಶೂಟಿಂಗ್ ಸ್ಥಗಿತಗೊಂಡಿದೆ. ಚಿತ್ರೀಕರಣದ ಭವಿಷ್ಯ ಕುರಿತು ಚಿತ್ರತಂಡ ಕಂಗಾಲಾಗಿದೆ. ನಾನು ‘ಗಾಂಧಿಗಿರಿ’ ಚಿತ್ರದ ಮೇಲೆ ಸಾಕಷ್ಟು ಹಣ ಹೂಡಿದ್ದೇನೆ. ಇನ್ನುಳಿದ ಚಿತ್ರೀಕರಣಕ್ಕೆ ಬೇಕಾಗಿರುವ ಹಣವನ್ನು ಬಡ್ಡಿಗೆ ತಂದಿದ್ದೇನೆ. ಸದ್ಯಕ್ಕೆ ಮುಂದಿನ ದಾರಿ ತಿಳಿಯದೆ ಕಂಗಾಲಾಗಿದ್ದೇನೆ. ವಾಣಿಜ್ಯ ಮಂಡಳಿಯ ಗಮನಕ್ಕೆ ತರದೆ ನಮಗೆ ಬೇರೆ ದಾರಿಯಿಲ್ಲ. ಸುಸೂತ್ರವಾಗಿ ನಮ್ಮ ಬಾಕಿ ಉಳಿದಿರುವ ಚಿತ್ರೀಕರಣ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಫಿಲ್ಮ್‌ ಚೇಂಬರ್‌ಗೆ ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top