fbpx
ಸಮಾಚಾರ

ಸಂಜನಾ ಸೀಕ್ರೆಟ್ ಮದುವೆ ಬಟಾಬಯಲು: ಯಾರ ಜೊತೆ ಗೊತ್ತಾ? ಮದುವೆ ಆಗಿಲ್ಲ ಅಂತ ಸುಳ್ಳು ಹೇಳಿದ್ಯಾಕೆ?

ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾದ ನಂಟಿದೆ ಎಂದು ಸಿಸಿಬಿ ಪೊಲೀಸರ ಅತಿಥಿಯಾಗಿರುವ ನಟಿ ಸಂಜನಾ ಗಲ್ರಾನಿ ಅವರ ಮದುವೆ ಕುರಿತವಾಗಿ ಸ್ಫೋಟಕ ಫೋಟೋವೊಂದು ಹೊರಬಿದ್ದಿದ್ದು, ನನಗೆ ಮದುವೆ ಆಗಿಲ್ಲ ಅಗಿಲ್ಲ ಎಂದು ನಟಿ ಸುಳ್ಳು ಹೇಳಿದರಾ ಎಂಬ ಅನುಮಾನ ಮೂಡಲು ಕಾರಣವಾಗಿದೆ.

ಕೆಲ ತಿಂಗಳ ಹಿಂದೆ ರಹಸ್ಯವಾಗಿ ಸಂಜನಾ ಸಪ್ತಪದಿ ತುಳಿದಿದ್ದಾರೆ. ಯಾರಿಗೂ ಹೇಳದೆ ಕೇವಲ 20 ಜನರ ಸಮ್ಮುಖದಲ್ಲಿ ವೈದ್ಯ ಅಜೀಜ್ ಜೊತೆ ಮದುವೆಯಾಗಿದ್ದಾರೆ. ಮದುವೆಯಾದ ವಿಷಯವನ್ನು ಗುಪ್ತವಾಗಿ ಕಾಪಾಡಿಕೊಂಡಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಡ್ರಗ್ಸ್​ ಕೇಸ್​ನಲ್ಲಿ ಸಂಜನಾ, ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಪಡುತ್ತಿದ್ದಂತೆ ಅವರ ಮದುವೆ ಕುರಿತಾಗಿ ತರಹೇವಾರಿ ಬಿಸಿಬಿಸಿ ಸುದ್ದಿಗಳು ಹರಿದಾಡಿತ್ತು. ಸಂಜನಾ ಮತ್ತು ಅಜೀಜ್​ ಪಾಷಾ ಇಬ್ಬರೂ ಲಿವಿಂಗ್​ ರಿಲೇಷನ್​ಶಿಪ್​ನಲ್ಲಿ ಇದ್ದರು ಎಂಬ ಸುದ್ದಿಯೂ ಹಬ್ಬಿತ್ತು. ಇದೀಗ ಅವರಿಬ್ಬರೂ ಮದುಮಕ್ಕಳ ಉಡುಗೆತೊಟ್ಟು ಅಕ್ಕಪಕ್ಕದಲ್ಲೇ ಕುಳಿತಿರುವ ಫೋಟೋ ವೈರಲ್​ ಆಗಿದೆ.

ಬಹುಭಾಷಾ ನಟಿ ಸಂಜನಾ ಗಲ್ರಾನಿ ವೈದ್ಯ ಅಜೀಜ್​ ಪಾಷಾರನ್ನು ಗುಪ್ತವಾಗಿ ಮದುವೆ ಆಗಿದ್ದಾರಾ? ಎಂಬ ಚರ್ಚೆ ಎಲ್ಲೆಡೆ ಆಗುತ್ತಿದೆ. ಗಂಡನ ಬಗ್ಗೆ ಸಂಜನಾ ಯಾಕೆ ವಿಷಯ ಮುಚ್ಚಿಟ್ಟಿದ್ರು, ತಾನು ಇನ್ನೂ ಮದುವೆಯನ್ನೇ ಆಗಿಲ್ಲ ಎಂದಿದ್ದೇಕೆ? ಇದರ ಹಿಂದಿನ ಉದ್ದೇಶವೇನು? ರಿಯಲ್​ ಗಂಡನ ಬಗ್ಗೆ ರೀಲ್​ ಬಿಟ್ಟಿದ್ಯಾಕೆ? ಎಂಬ ಪ್ರಶ್ನೆ ಮೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top