fbpx
ಸಮಾಚಾರ

“ಪೋಷಕರ ಭಿಕ್ಷೆಯಾಗಿರುವ ನಿಮ್ಮ ದೇಹ ಹಾಳು ಮಾಡಿಕೊಳ್ಳುವ ಹಕ್ಕು ನಿಮಗಿಲ್ಲ” ಯುವಕರಿಗೆ ಯಶ್ ಸಂದೇಶ

‘ಡ್ರಗ್ಸ್‌ ಇಡೀ ಜಗತ್ತಿಗೆ ಮಾರಕವಾದುದು. ಈ ಜಾಲದಲ್ಲಿ ಯಾರೆಲ್ಲಾ ಇದ್ದಾರೆ ಎಂದು ಹುಡುಕಿದರೆ ಹತ್ತು ವಿಭಾಗಕ್ಕೆ ಸೇರಿದವರು ಸಿಗುತ್ತಾರೆ. ಆದರೆ, ಹೈಲೇಟ್ಸ್‌ ಆಗುವುದು ಮಾತ್ರ ಕನ್ನಡ ಚಿತ್ರರಂಗ. ಚಿತ್ರರಂಗದ ಮೇಲಷ್ಟೇ ದೂಷಣೆ ಮಾಡಬೇಡಿ’ ಎಂದು ‘ರಾಕಿಂಗ್‌ ಸ್ಟಾರ್’ ಯಶ್‌ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಯಶ್ “ಡ್ರಗ್ಸ್ ಅನ್ನೋದು ದೇಶ ಹಾಗೂ ಜಗತ್ತಿಗೆ ಮಾರಕ. ಅದರಲ್ಲಿ ಯಾರು ಯಾರು ಇದ್ದಾರೆ ಅಂದರೆ ಅದರಲ್ಲಿ 10 ವಲಯದವರು ಇರುತ್ತಾರೆ. ಹೀಗಾಗಿ ಡ್ರಗ್​ ವಿಚಾರ ಬಂದಾಗ ಚಿತ್ರರಂಗ ಎಂದು ಹೇಳುವುದು ಸರಿಯಲ್ಲ. ಡ್ರಗ್ಸ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಒಳ್ಳೆ ಕೆಲಸ ಮಾಡ್ತಿವೆ,” ಎಂದು ಶ್ಲಾಘಿಸಿದರು.

ಯುವ ಜನತೆಗೆ ಸಂದೇಶ:
“ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ. ಇದು ನಿಮ್ಮ ಅಪ್ಪ ಅಮ್ಮ ಕೊಟ್ಟಿರುವ ಭಿಕ್ಷೆ. ನನಗೂ ಮಕ್ಕಳಾಗಿವೆ. ಮಕ್ಕಳಿಗೆ ಏನು ಸಮಸ್ಯೆ ಆಗುತ್ತೋ ಎಂದು ಅಪ್ಪ ಅಮ್ಮದಿರು ಯೋಚನೆ ಮಾಡುತ್ತಾರೆ. ಡ್ರಗ್ಸ್ ತಗೊಂಡು ಹಾಳಾಗೋದು ನಿಮ್ಮ ಹಕ್ಕಲ್ಲ. ಅಪ್ಪ ಅಮ್ಮನಿಗಾಗಿ ಗೌರವ ತರುವ ಕೆಲಸ ಮಾಡಿ. ಮರ್ಯಾದೆಯಿಂದ ಇಂತಹ ದುಶ್ಚಟಗಳನ್ನು ಬಿಡಿ. ಅಪ್ಪ ಅಮ್ಮನಿಗಾಗಿ ಬದುಕಿ,” ಎನ್ನುವ ಸಂದೇಶವನ್ನು ಯಶ್​ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top