fbpx
ಸಮಾಚಾರ

ಹರ್ಭಜನ್ ಸಿಂಗ್‍ಗೆ ₹4 ಕೋಟಿ ಪಂಗನಾಮ: ಪೊಲೀಸ್ ಠಾಣೆ ಮೆಟ್ಟಿಲೇರಿದ ಭಜ್ಜಿ

ಟೀ ಇಂಡಿಯಾ ಮಾಜಿ ಆಟಗಾರ ಟರ್ಬನೇಟರ್​ ಖ್ಯಾತಿಯ ಹರ್ಭಜನ್​ ಸಿಂಗ್, ಉದ್ಯಮಿಯೊಬ್ಬರನ್ನ ನಂಬಿ​ ಬರೋಬ್ಬರಿ 4 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಇದೆ ವಿಚಾರವಾಗಿ ಭಜ್ಜಿ ದೂರು ದಾಖಲಿಸಿದ್ದಾರೆ.

ಹರ್ಭಜನ್‌ ಸಿಂಗ್ ಹೇಳುವ ಪ್ರಕಾರ, 2015ರಲ್ಲಿ ತನ್ನ ಸ್ನೇಹಿತನೊಬ್ಬನ ಮೂಲಕ ಬ್ಯುಸಿನೆಸ್ ಮ್ಯಾನ್ ಪರಿಚಯ ಆಗಿದ್ದನಂತೆ. ಆ ಬಳಿಕ ಭಜ್ಜಿ ಜಿ ಮಹೇಶ್ ಎನ್ನುವ ಆ ಉದ್ಯಮಿಗೆ 4 ಕೋ.ರೂ. ಸಾಲ ನೀಡಿದ್ದರಂತೆ. ಸಾಲ ನೀಡಿದ ಕೆಲ ವರ್ಷಗಳ ಬಳಿಕ ಸಿಂಗ್ ಆ ವ್ಯಕ್ತಿಯನ್ನು ಸಾಲ ಪಾವತಿಸುವಂತೆ ಅನೇಕ ಬಾರಿ ಸಂಪರ್ಕಿಸಿದ್ದರು. ಆದರೆ ಆ ವ್ಯಕ್ತಿ ಹಣ ನೀಡಲು ವಿಳಂಬ ಮಾಡುತ್ತಲೇ ಇದ್ದರಂತೆ.

ಸಾಲ ಪಡೆದಿದ್ದ ಉದ್ಯಮಿ ಮಹೇಶ್ ಆ ಬಳಿಕ ಸಾಕಷ್ಟು ಬಾರಿ ಹರ್ಭಜನ್ ಹಣ ವಾಪಸ್ ನೀಡುವುದಾಗಿ ಸಮಯ ದೂಡಿದ್ದ. ಆದರೆ ಕಳೆದ ತಿಂಗಳು 25 ಲಕ್ಷ ರೂ.ಗಳ ಚೆಕ್ ಒಂದನ್ನು ಹರ್ಭಜನ್‍ಗೆ ನೀಡಿದ್ದ. ಆದರೆ ಉದ್ಯಮಿಯ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು. ಇದರೊಂದಿಗೆ ಹಣ ಪಡೆಯಲು ನೇರ ಚೆನ್ನೈಗೆ ತೆರಳಿದ ಹರ್ಭಜನ್ ಪೊಲೀಸರಿಗೆ ದೂರು ನೀಡಿದ್ದರು.

ಇತ್ತ ಹರ್ಭಜನ್ ಸಿಂಗ್ ದೂರು ನೀಡಲು ಮುಂದಾಗುತ್ತಿದಂತೆ ಉದ್ಯಮಿ ಮಹೇಶ್ ಮದ್ರಾಸ್ ಹೈಕೋರ್ಟಿನಲ್ಲಿ ನಿರೀಕ್ಷಿತ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಹರ್ಭಜನ್ ಅವರು ಸಹಾಯಕ ಪೊಲೀಸ್ ಆಯುಕ್ತ ವಿಶ್ವೇಶ್ವರಯ್ಯ ಅವರಿಗೆ ತಮ್ಮ ದೂರನ್ನು ಸಲ್ಲಿಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮಾಧ್ಯಮ ವರದಿಯ ಅನ್ವಯ ಈಗಾಗಲೇ ಎಸಿಪಿ ಅವರು ಉದ್ಯಮಿ ಮಹೇಶ್‍ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಉದ್ಯಮಿ ಮಹೇಶ್, ಈಗಾಗಲೇ ಮದ್ರಾಸ್ ಹೈಕೋರ್ಟ್‌ಗೆ ಆ್ಯಂಟಿಸಿಪೇಟರ್ ಬೇಲ್‌ಗೆ ಮನವಿ ಮಾಡಿದ್ದಾರೆ. ಹರ್ಭಜನ್ ಸಿಂಗ್‌ನಿಂದ ಪಡೆದುಕೊಂಡ ಸಾಲವನ್ನು ಹಿಂತುರಿಗಿಸಲಾಗಿದೆ ಎಂದು ಅಫಿದವಿತ್ ಸಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top