fbpx
ಸಮಾಚಾರ

ಈ ಕಾರಣಕ್ಕೆ ಅಕ್ಷಯ್ ಕುಮಾರ್ ಪ್ರತಿನಿತ್ಯ ಗೋಮೂತ್ರ ಕುಡಿಯುತ್ತಾರಂತೆ

ಬಾಲಿವುಡ್‌ನ ಖಿಲಾಡಿ, ಭಾರತದ ಅತಿದೊಡ್ಡ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಪ್ರತಿದಿನ ಹಸುವಿನ ಗಂಜಲ ಕುಡಿಯುತ್ತಾರಂತೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಕೂಡ ಬಂಡೀಪುರದಲ್ಲಿ ಗ್ರಿಲ್ಸ್‌ ಜೊತೆಗೆ ಕಾಡು ಸುತ್ತಿದ್ದಾರೆ. ಸೆಪ್ಟೆಂಬರ್‌ 11ರಂದು ರಾತ್ರಿ 8ಗಂಟೆಗೆ ಡಿಸ್ಕವರಿ ಪ್ಲಸ್‌ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಡಿಸ್ಕವರಿ ಚಾನೆಲ್‌ನಲ್ಲಿ ಸೆಪ್ಟೆಂಬರ್‌ 14ರಂದು ರಾತ್ರಿ 8ಗಂಟೆಗೆ ವೀಕ್ಷಣೆಗೆ ಲಭ್ಯವಿದೆ.

ಪ್ರಸ್ತುತ ಅಕ್ಷಯ್‌ ಕುಮಾರ್‌ ಸ್ಕಾಟ್ಲೆಂಡ್‌ನಲ್ಲಿ ‘ಬೆಲ್‌ ಬಾಟಂ’ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ ಅಕ್ಷಯ್‌ ಮತ್ತು ನಟಿ ಹುಮಾ ಖುರೇಷಿ ನಡೆಸಿದ ಇನ್‌ಸ್ಟಾಗ್ರಾಮ್‌ ಲೈವ್‌ ಸೆಷನ್‌ನಲ್ಲಿ ಬೇರ್‌ ಗ್ರಿಲ್ಸ್‌ ಪಾಲ್ಗೊಂಡು, ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿರುವುದು ವಿಶೇಷ.

 

 

ಈ ಕಾರ್ಯಕ್ರಮದಲ್ಲಿ ಹುಮಾ ಅವರು ಅಕ್ಷಯ್‌ ಅವರಿಗೆ ಪ್ರಾಣಿಗಳ ಮೂತ್ರ ಕುಡಿಯುವ ಬಗ್ಗೆ, ಬೇರ್ ಗ್ರಿಲ್ಸ್ ಆನೆಯ ಮಲದಲ್ಲಿ ಮಾಡಿದ ಟೀ ಕುಡಿದಿದ್ದು ಹೇಗಿತ್ತು? ಅಂತ ಕೇಳಿದ್ದಾರೆ. ಆಗ ನಾನು ಆಯುರ್ವೇದದ ಕಾರಣಗಳಿಂದ ಪ್ರತಿದಿನ ಗೋಮೂತ್ರ ಕುಡಿಯುತ್ತೇನೆ, ಇದು ದೊಡ್ಡ ವಿಚಾರವಲ್ಲ ಎಂದಿದ್ದಾರೆ ಅಕ್ಷಯ್ ಕುಮಾರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top