fbpx
ಸಮಾಚಾರ

“ಬ್ಲೂ*ಫಿಲಂ ನೋಡುವವರೆಲ್ಲಾ ಡಿಸಿಎಂ ಆಗುತ್ತಿದ್ದಾಗ ಜನರಿಗೂ ನಗು, ದುಃಖ ಆಗಿತ್ತು”: ಸಾರಾ ಮಹೇಶ್ ತಿರುಗೇಟು

ಡ್ರಗ್ಸ್ ದಂಧೆ ಕುರಿತು ತನಿಖೆ ನಡೆಯುತ್ತಿರುವಾಗಲೇ ಈ ವಿಚಾರ ರಾಜಕೀಯವಾಗಿದ್ದು, ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಇದೀಗ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಗೆ ಮಾಜಿ ಸಚಿವ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತು ಕೇಳಿದ್ರೆ ನಗು ಬರುತ್ತದೆ. ಡ್ರಗ್ಸ್ ಜಾಲ ನಿಭಾಯಿಸುವಲ್ಲಿ ಕುಮಾರಸ್ವಾಮಿ ವಿಫಲರಾಗಿದ್ರಾ ಎಂದು ಸವದಿ ಪ್ರಶ್ನಿಸಿದ್ದರು. ಆಡಳಿತಕ್ಕೆ ಬೇಸತ್ತು ಅನೇಕ ಶಾಸಕರು ಹೊರಗೆ ಬಂದಿದ್ದಾರೆ. ಕುಣಿಯೋಕೆ ಬರದೇ ಇರುವವರು ನೆಲ ಡೊಂಕು ಎನ್ನುವ ರೀತಿಯಲ್ಲಿ ಅವರ ಹೇಳಿಕೆ ಇದೆ. ಇಷ್ಟೆಲ್ಲ ಗೊತ್ತಿದ್ದರು ಒಂದು ವರ್ಷ ಯಾಕೆ ಸುಮ್ಮನೆ ಎಂದು ಹೆಚ್​​ಡಿಕೆ ವಿರುದ್ದ ಡಿಸಿಎಂ ಲಕ್ಷ್ಮಣ ಸವದಿ ಟೀಕಿಸಿದ್ದರು.

 

 

ಸವದಿಯವರ ಈ ಹೇಳಿಕೆಗೆ ಜೆಡಿಎಸ್ ಮುಖಂಡ ಸಾರಾ ಮಹೇಶ್ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಜೆಡಿಎಸ್‌ ಮುಖಂಡ ಸಾ.ರಾ.ಮಹೇಶ್‌, ‘ಡ್ರಗ್ಸ್‌ ದಂದೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಎಚ್‌ಡಿಕೆ ಅವರ ಆರೋಪ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಗು ತರಿಸಿತ್ತಂತೆ. ಬ್ಲೂ ಫಿಲಂ ನೋಡುವ ಅಡಿಕ್ಷನ್‌ (ವ್ಯಸನ) ಇರುವವರು ಈ ರಾಜ್ಯದ ಡಿಸಿಎಂ ಆಗುತ್ತಿದ್ದಾರೆ ಎಂದಾಗ ರಾಜ್ಯದ ಜನರಿಗೇ ನಗು, ದುಃಖ ಬಂದಿತ್ತು. ಅಸಲಿಗೆ ಎಲ್ಲವೂ ವ್ಯವಸನವೇ ಡ್ರಗ್ಸ್‌ ಆದರೂ, ಬ್ಲೂ ಫಿಲ್ಮಂ ಆದರೂ…’ ಎಂದು ವ್ಯಂಗ್ಯವಾಡಿದ್ದಾರೆ.

2012ರಲ್ಲಿ ಸದನ ನಡೆಯುತ್ತಿರುವಾಗಲೇ ಬ್ಲೂ ಫಿಲಂ ನೋಡಿದ ಆರೋಪ ಲಕ್ಷ್ಮಣ ಸವದಿ ಅವರ ಮೇಲೆ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top