fbpx
ಸಮಾಚಾರ

“ಡ್ರ*ಗ್ಸ್ ಮಾಫಿಯಾದಲ್ಲಿ 32 ರಾಜಕಾರಣಿಗಳು ಶಾಮೀಲು;ಸಾಕ್ಷಿ ಸಮೇತ 32 ಜನರ ಲಿಸ್ಟ್ ಗೃಹ ಸಚಿವರ ಕೈ ಸೇರಲಿದೆ “

ರಾಜ್ಯದ ಡ್ರಗ್ಸ್ ಪ್ರಕರಣದಲ್ಲಿ 32 ರಾಜಕಾರಣಿಗಳು ಶಾಮೀಲಾಗಿದ್ದಾರೆ. ಒಂದು ವಾರದೊಳಗೆ ಆಧಾರ ಸಹಿತವಾಗಿ ಎಲ್ಲಾ 32 ರಾಜಕಾರಣಿಗಳ ಪಟ್ಟಿಯನ್ನು ಗೃಹ ಸಚಿವರಿಗೆ ಹಾಗೂ ಸಿಸಿಬಿ ಪೊಲೀಸರಿಗೆ ನೀಡಲಿದ್ದೇನೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

 

 

ಇದು ಕೇವಲ ಒಂದು ಮಾಫಿಯಾ ಅಲ್ಲ. ಪಾಕಿಸ್ತಾನದಿಂದ ದಾವೂದ್‌ ಇಬ್ರಾಹಿಂ ನಡೆಸುತ್ತಿರುವ ಡ್ರಗ್ಸ್ ಜಿಹಾದ್. ಇದರ ಉದ್ದೇಶ ಯುವಜನರನ್ನು ನಿರ್ವೀರ್ಯಗೊಳಿಸುವುದಾಗಿದೆ. ಈ ಜಾಲದೊಳಗೆ ಸಿಲುಕಿರುವ ರಾಜಕಾರಣಿಗಳು ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಲ್ಲಿದ್ದಾರೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿಗೆ ಸೇರಿದ ಬಹುತೇಕ ಬಿಬಿಎಂಪಿ ಸದಸ್ಯರ ಪುತ್ರರು ಪಬ್‌ ಹಾಗೂ ಕ್ಲಬ್‌ಗಳನ್ನು ನಡೆಸುತ್ತಿದ್ದಾರೆ. ಇಲ್ಲೆಲ್ಲ ಮಾದಕವಸ್ತುಗಳು ಸಿಗುತ್ತಿವೆ. ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತೆಸೆಯುತ್ತೇವೆ ಎಂದು ಹೇಳುವ ಮೂಲಕ ರಾಜಕಾರಣಿಗಳು ಬುರುಡೆ ಬಿಡುತ್ತಿದ್ದಾರೆ ಎಂದರು.

ಲವ್ ಜಿಹಾದ್-ಡ್ರಗ್ಸ್ ಗೂ ಸಂಬಂಧ
ನಟಿ ಸಂಜನಾ ಗಂಡ ಡಾ.ಅಜೀಜ್ ಕೂಡ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ. ಲವ್ ಜಿಹಾದ್ ಮತ್ತು ಡ್ರಗ್ಸ್ ಎರಡಕ್ಕೂ ನೇರ ಸಂಬಂಧವಿದೆ. ಇದಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದಕ್ಕೆ ಮೂಲ ಪುರುಷ. ಅಜೀಮ್ ಅಸ್ತಾನ ಎಂಬ ದೇಶದ್ರೋಹಿ ಸೇರಿದಂತೆ ಇವರೆಲ್ಲರೂ ಇಡೀ ಚಿತ್ರರಂಗವನ್ನು ಆವರಿಸಿಕೊಂಡಿದ್ದಾರೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top