fbpx
ಸಮಾಚಾರ

1.75 ಲಕ್ಷ ಮನೆಗಳನ್ನು ಉದ್ಘಾಟಿಸಿದ ಪ್ರಧಾನಿ: ಮೋದಿಯಿಂದ ಮನೆ ಬೀಗ ಹಸ್ತಾಂತರ

ಪ್ರಧಾನ ಮಂತ್ರಿ ಆವಸ್ ಯೋಜನೆ ಅಡಿಯಲ್ಲಿ ಮಧ್ಯಪ್ರದೇಶದಲ್ಲಿ ನಿರ್ಮಿಸಲಾಗಿದ್ದ 1.75 ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಉದ್ಘಾಟಿಸಿದರು.

ಪ್ರಧಾನಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಮನೆಗಳನ್ನು ಉದ್ಘಾಟಿಸಿದರು ಮತ್ತು ಈ ಯೋಜನೆಯಡಿ ಸವಲತ್ತುಗಳನ್ನು ಪಡೆದ ಧಾರ್, ಸಿಂಗ್ರೌಲಿ ಮತ್ತು ಗ್ವಾಲಿಯರ್ ಅವರ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಯೋಜನೆಯ ಫಲಾನುಭವಿಗಳನ್ನು ಅಭಿನಂದಿಸಿದ ಪಿಎಂ ಮೋದಿ, “ಈ ದೀಪಾವಳಿ ಮತ್ತು ಇತರ ಹಬ್ಬಗಳಲ್ಲಿ ನಿಮ್ಮ ಆಚರಣೆ ಇನ್ನಷ್ಟು ಸಡಗರದಿಂದ ಕೂಡಿರಲಿದೆ. ಇದು ಕೊರೋನಾ ಕಾಲವಾಗಿರದೆ ಹೋಗಿದ್ದರೆ ನಿಮ್ಮ ಪ್ರಧಾನ ಸೇವಕ (ಪ್ರಧಾನಿ ಮೋದಿ) ನಿಮ್ಮ ನಡುವೆ ಇರುತ್ತಿದ್ದರು” ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಭಾರತೀಯ ಜನತಾ ಪಕ್ಷದ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಇತರರು ಭಾಗವಹಿಸಿದ್ದರು

2022ರ ಹೊತ್ತಿಗೆ ಎಲ್ಲಾ ಅಗತ್ಯವಿರುವವರಿಗೆ ಮನೆಗಳನ್ನು ಒದಗಿಸುವುದಾಗಿ ಘೋಷಿಸಿ ಪಿಎಂ ನರೇಂದ್ರ ಮೋದಿ ಅವರು 20 ನವೆಂಬರ್ 2016ರಂದು ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣವನ್ನು ಪ್ರಾರಂಭಿಸಿದರು.

ಈ ಯೋಜನೆಯಡಿ ದೇಶಾದ್ಯಂತ ಈವರೆಗೆ ಸುಮಾರು 1.14 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮಧ್ಯಪ್ರದೇಶ ರಾಜ್ಯ ಒಂದರಲ್ಲೇ ಈವರೆಗೆ ಸ್ವಂತ ಸೂರು ಇಲ್ಲದ 17 ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಕ್ಕಿದೆ.

ಈ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ 1.20 ಲಕ್ಷ ರೂ.ಗಳ ಸರ್ಕಾರದ ಅನುದಾನ ಸಿಗುತ್ತದೆ. ಇದರಲ್ಲಿ 60 ಪ್ರತಿಶತ ಕೇಂದ್ರದಿಂದ ಮತ್ತು 40 ಪ್ರತಿಶತವನ್ನು ರಾಜ್ಯದಿಂದ ನೀಡಲಾಗುತ್ತದೆ. ಈ ಯೋಜನೆಯಡಿ ದೇಶಾದ್ಯಂತ 2022ರ ವೇಳೆಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ನಿಗದಿಪಡಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top