fbpx
ಸಮಾಚಾರ

ದಿವಂಗತ ತಾಯಿಯ ಹೆಸರಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾದ ಸೋನು ಸೂದ್

ಕೊರೋನಾ ಕಾಲದಲ್ಲಿ ಹಲವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅಕ್ಷರಶಃ ದೇವದೂತನಾಗಿ ಕಾಣಿಸಿಕೊಂಡಿದ್ದಾರೆ. ಯಾರೆಲ್ಲಾ ಕಷ್ಟದಲ್ಲಿದ್ದಾರೋ ಅವರಿಗೆ ತಮ್ಮ ಕೈಯಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ ಸೋನು ಸೂದ್. ಈಗ ತಮ್ಮ ದಿವಂಗತ ತಾಯಿಯ ಹೆಸರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದ್ದಾರೆ.

ಬಡತನದಲ್ಲಿ ಸಿಲುಕಿ ಕಷ್ಟುಪಟ್ಟು ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲು ನಟ ಸೋನು ಸೂದ್ ಮುಂದಾಗಿದ್ದಾರೆ. ತಮ್ಮ ತಾಯಿ ಸರೋಜ್ ಸೂದ್ ಅವರ ಹೆಸರಿನಲ್ಲಿ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಟ ಯೋಜಿಸಿದ್ದಾರೆ.

 

 

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಸೋನು ಸೂದ್ ” ನನ್ನ ತಾಯಿ ಪ್ರೊಫೆಸರ್ ಸರೋಜ್ ಸೂದ್ ಹೆಸರಲ್ಲಿ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಅವರು ಪಂಜಾಬ್‌ನ ಮೋಗದಲ್ಲಿ ಕಲಿಸುತ್ತಿದ್ದರು. ಅದೂ ಉಚಿತವಾಗಿ. ಆಕೆ ಆಕೆಯ ಕೆಲಸವನ್ನು ನಾನು ಮುಂದುವರಿಸುವಂತೆ ಕೇಳಿಕೊಂಡಿದ್ದರು. ಈಗ ಆ ಕೆಲಸ ಮಾಡಲು ಸೂಕ್ತ ಸಮಯ ಎಂದಿದ್ದಾರೆ.

ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೋಟಿಕ್ಸ್ ಮತ್ತು ಅಟೊಮೇಷನ್, ಸೈಬರ್ ಸೆಕ್ಯುರಿಟಿ, ಡಾಟಾ ಸೈನ್ಸ್, ಫ್ಯಾಷನ್, ಪತ್ರಿಕೋದ್ಯಮ, ಬ್ಯುಸಿನೆಸ್ ಸ್ಟಡೀಸ್ ಸೇರಿ ಹಲವು ಕ್ಷೇತ್ರದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರುವವರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಅವರ ಎಲ್ಲ ಖರ್ಚುಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top