fbpx
ಸಮಾಚಾರ

ಡ್ರ*ಗ್ ಪೆಡ್ಲರ್‌ ಶೇಖ್ ಫೈಜಲ್‍ ಜೊತೆ ಒಡನಾಟ ಆರೋಪ: ಸ್ಪಷ್ಟನೆ ನೀಡಿದ ನಟಿ ಐಂದ್ರಿತಾ ರೇ; ಹೇಳಿದ್ದೇನು ಗೊತ್ತಾ?

ಶ್ರೀಲಂಕಾದಲ್ಲಿ ಫಾಸಿಲ್‌ ಆಯೋಜಿಸಿದ್ದ ಬಾಲೀಸ್‌ ಕ್ಯಾಸಿನೊ ಪಾರ್ಟಿಯಲ್ಲಿ ಐಂದ್ರಿತಾ ರೇ ಭಾಗವಹಿಸಿದ್ದಾರೆ. ಫಾಸಿಲ್‌ ಜತೆಗೆ ಸಾಕಷ್ಟು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ, ‘ಪಾರ್ಟಿಗೆ ಆಹ್ವಾನಿಸಿದ್ದಕ್ಕೆ ಧನ್ಯವಾದ. ಈದ್‌ ವೇಳೆ ಬಾಲೀಸ್‌ನಲ್ಲಿ ಭೇಟಿಯಾಗೋಣಾ’ ಎಂದು ಹೇಳಿದ್ದಾರೆ. ಈ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜೊತೆಗೆ ಬೆಂಗಳೂರಿನ ಸ್ಟಾರ್‌ ಹೋಟೆಲ್‌ವೊಂದರಲ್ಲಿಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಐಂದ್ರಿತಾ ಮತ್ತು ಫಾಸಿಲ್‌ ಭೇಟಿಯಾಗಿದ್ದಾರೆ. ಐಂದ್ರಿತಾ ರೇ ತೆಗೆಸಿಕೊಂಡಿರುವ ಫೋಟೊದಲ್ಲಿ ಫಾಸಿಲ್‌ ಜತೆಗೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸಹೋದರ ಸೋಹೇಲ್‌ ಖಾನ್‌ ಕೂಡ ಇದ್ದಾರೆ.

ಈ ಆರೋಪಗಳ ಕುರಿತು ಸ್ಪಷ್ಟನೆ ನೀಡಿರುವ ನಟಿ ಐಂದ್ರಿತಾ ರೇ ” ‘ಡ್ರಗ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಶೇಖ್ ಫೈಜಲ್‍ಗೂ ನನಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ. “ನಾನು ಸಿನಿಮಾ ಪ್ರಮೋಶನ್ ಗಾಗಿ ಕೊಲಂಬೋದಲ್ಲಿರುವ ಕ್ಯಾಸಿನೋಗೆ ಹೋಗಿದ್ದೆ. ಚಿತ್ರ ಪ್ರಚಾರಕ್ಕಾಗಿ ನಮ್ಮ ಮ್ಯಾನೇಜರ್ ಹೋಗಬೇಕು ಅಂತ ಹೇಳಿದ್ದರಿಂದ ಸೊಹೈಲ್ ಮತ್ತು ಅರ್ಬಾಜ್ ಖಾನ್ ಜೊತೆ ಹೋಗಿದ್ದೇನೆ. ಶೇಖ್ ಫೈಝಿಲ್ ನನಗೆ ವೈಯಕ್ತಿಯ ಪರಿಚಯವಿಲ್ಲ” ಎಂದು ಐಂದ್ರಿಯಾ ರೇ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಐಂದ್ರಿತಾ, ‘ಅದು ಮೂರು ವರ್ಷಗಳ ಹಿಂದಿನ ವಿಡಿಯೊ. ಸಿನಿಮಾವೊಂದರ ಪ್ರಚಾರಕ್ಕಾಗಿ ಶ್ರೀಲಂಕಾಗೆ ಹೋಗಿದ್ದೆ. ನಟಿ ಆಗಿರುವ ಕಾರಣಕ್ಕೆ ಪಾರ್ಟಿ ಬಗ್ಗೆ ಮಾತನಾಡಿಸಿದ್ದರು. ಆದರೆ, ಫೈಜಲ್ ನನಗೆ ವೈಯಕ್ತಿಕ ಪರಿಚಯ ಇಲ್ಲ. ಅವರಿಗೂ ನನಗೂ ಸಂಬಂಧವಿಲ್ಲ’ ಎಂದಿದ್ದಾರೆ.

ಸಿನಿಮಾ ಪ್ರಮೋಶನ್ ಚೆನ್ನಾಗಿ ಆಗುತ್ತೆ ಅಂತಾ ಹೇಳಿದ್ದರಿಂದ ಚಿತ್ರತಂಡ ನಮ್ಮನ್ನ ಕ್ಯಾಸಿನೋಗೆ ಕಳುಹಿಸಿದ್ದರು. ಕ್ಯಾಸಿನೋ ಪಾರ್ಟಿಗೆ ತೆರಳಿರುವ ಫೋಟೋಗಳು ನನ್ನ ಇನ್‍ಸ್ಟಾಗ್ರಾಂನಲ್ಲಿವೆ. ಯಾವ ಫೋಟೋ ಮತ್ತು ವಿಡಿಯೋಗಳನ್ನ ಡಿಲೀಟ್ ಮಾಡಿಲ್ಲ. ಪ್ರೊಫೆಷನಲ್ ಗಾಗಿ ಕ್ಯಾಸಿನೋಗೆ ಹೋಗಿದ್ದೆ, ಎರಡು ಬಾರಿ ಸ್ಟೆಪ್ ಹಾಕಿ ಬಂದಿದ್ದೇನೆ. ಕರೀಷ್ಮಾ ಕಪೂರ್, ಸೊಹೈಲ್ ಖಾನ್, ಅರ್ಬಾಜ್ ಖಾನ್ ಜೊತೆ ನನ್ನ ಜೊತೆ ಬಂದಿದ್ದರು.

ಎರಡನೇ ಬಾರಿ ಅರ್ಬಾಜ್ ಖಾನ್ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿ ಮಾಡಲಾಗಿತ್ತು. ಬರ್ತ್ ಡೇ ಪಾರ್ಟಿ ವೇಳೆ ಫೈಝಿಲ್ ಬಂದಿದ್ದ. ಆದ್ರೆ ಅವನನ್ನ ನಾನು ಭೇಟಿಯಾಗಿರಲಿಲ್ಲ. ಪಾರ್ಟಿಯಲ್ಲಿದ್ದಾಗ ಸಹಜವಾಗಿ ಫೈಝಿಲ್ ಜೊತೆಗೆ ಫೋಟೋ ತೆಗೆಸಿಕೊಳ್ಳಲಾಗಿತ್ತು. ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿವೆ. ಆದರೆ ಫಾಝಿಲ್ ಬಗ್ಗೆ ನಮಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top