fbpx
ಸಮಾಚಾರ

ಮೇಘನಾ ರಾಜ್ ನಿವಾಸದಲ್ಲಿ ಮನೆಮಾಡಿದ ಸಂಭ್ರಮ

ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದ ಬಳಿಕ ಅವರ ಪತ್ನಿ ಮೇಘನಾ ರಾಜ್ ನೋವಿನಲ್ಲಿ ಮುಳುಗುವಂತಾಯಿತು. ತುಂಬು ಗರ್ಭಿಣಿಯಾದ ಅವರ ಸ್ಥಿತಿ ಕಂಡರೆ ಎಂಥವರಿಗೂ ಮನ ಕರಗುತ್ತದೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ಕೆಲವು ಹಿರಿಯ ನಟಿಯರು ಮೇಘನಾರ ಮನೆಗೆ ಭೇಟಿ ನೀಡಿ ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ.

ನಿನ್ನೆ ಅಷ್ಟೆ ಮೇಘನಾ ಮನೆಗೆ ತೆರಳಿದ ಶೃತಿ, ಸುಧಾರಣಿ ಮಾಳವಿಕ, ಮೇಘನಾ ಕುಟುಂಬದ ಜೊತೆ ಕಾಲ‌ ಕಳೆದಿದ್ದು, ಮೇಘನಾ ಸಂಭ್ರಮಕ್ಕೆ ಕಾರಣವಾಗಿದ್ದಾರೆ.

 

 

ಚಿರು ಅಗಲಿಕೆ ನಂತರ ಮೇಘನಾ ರಾಜ್ ಅವರನ್ನು ಹಲವಾರು ಸಿನಿಮಾ ಬಂಧುಗಳು, ಸ್ನೇಹಿತರು ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಭೇಟಿ ಮಾಡಿ ಮಾತನಾಡಿ ಸಂತೈಸಿದ್ದಾರೆ. ಇದೀಗ ಸ್ಯಾಂಡಲ್‍ವುಡ್ ಹಿರಿಯ ತಾರೆಯರು ನಟ ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ, ಕುಶಲೋಪಚರಿ ವಿಚಾರಿಸಿದ್ದಾರೆ.

ಈ ಭೇಟಿಯ ಬಗ್ಗೆ ಮಾಳವಿಕಾ ಅವಿನಾಶ್‌ ತಮ್ಮ ಸೋಶಿಯಲ್‌ ಮೀಡಿಯಾ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಬಾಲನಟಿ ಆಗಿದ್ದಾನಿಂದಲೂ ಸುಂದರ್‌ ರಾಜ್‌ ಅವರ ಪರಿಚಯ ಇದೆ. ಚಿತ್ರರಂಗದಲ್ಲಿ ಜೊತೆಯಾಗಿ ನಾವೆಲ್ಲ ಹಲವು ವರ್ಷ ಕಳೆದಿದ್ದೇವೆ. ಗರ್ಭಿಣಿಯಾದ ಮೇಘನಾ ರಾಜ್‌ ಅವರನ್ನು ಭೇಟಿ ಮಾಡಿದ್ದು ಹೃದಯಸ್ಪರ್ಶಿ ಆಗಿತ್ತು’ ಎಂದಿರುವ ಮಾಳವಿಕಾ ಅವರು ಪ್ರಮೀಳಾ ಜೋಷಾಯ್‌ ಮಾಡಿದ ಮಸಾಲೆ ದೋಸೆ ಸವಿದಿದ್ದಾರೆ. ಸುಧಾರಾಣಿ, ಶ್ರುತಿ ಮತ್ತು ಅವರ ಪುತ್ರಿ ಕೂಡ ಸಾಥ್‌ ನೀಡಿದ್ದಾರೆ.

 

 

ಮೇಘನಾ ಗರ್ಭಿಣಿ ಹಿನ್ನೆಲೆ ಸ್ಯಾಂಡಲ್‍ವುಡ್ ಹಿರಿಯ ನಟಿಯರು ಭೇಟಿಯಾಗಿ ಮಾತುಕತೆ ನಡೆಸಿ ಸ್ವಲ್ಪ ಹೊತ್ತ ಕಾಲ ಕಳೆದು ಬಂದಿದ್ದಾರೆ. ಪರಸ್ಪರ ಮಾತುಕತೆ ನಡೆಸಿ, ಮೇಘನಾ ಅವರ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ಅಲ್ಲದೆ ಕುಟುಂಬದೊಂದಿಗೆ ಕಾಲ ಕಳೆದು ಹರಟೆ ಹೊಡೆದಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top