fbpx
ಸಮಾಚಾರ

ಐಪಿಎಲ್​ನಲ್ಲಿ ಮಿಂಚು ಹರಿಸಲು ಬಂದ ಅಮೆರಿಕ ವೇಗಿ: IPLನಲ್ಲಿ‌ ಅವಕಾಶ ಪಡೆದ ಮೊದಲ ಅಮೆರಿಕ ಆಟಗಾರ ಇವರು!

IPL ಟೂರ್ನಿ ಹತ್ತಿರವಾಗ್ತಿದ್ದಂತೆ, ದಿನ ದಿನಕ್ಕೂ ರಂಗು ಪಡೆದುಕೊಳ್ತಿದೆ. ವಿದೇಶಿ ಸ್ಟಾರ್ ಆಟಗಾರರು ಮರಳುಗಾಡಿನ IPL ಸಂಗ್ರಾಮಕ್ಕೆ ಒಬ್ಬೊಬ್ಬರಾಗಿ ಎಂಟ್ರಿ ಕೊಡ್ತಿದ್ದಾರೆ. ಆದ್ರೀಗ IPL ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಅಮೆರಿಕದ ಆಟಗಾರನೊಬ್ಬ ಕಣಕ್ಕಿಳಿಯುತ್ತಿದ್ದಾನೆ.

ಕೋಲ್ಕತ್ತಾ ನೈಟ್‌ ರೈಡರ್ಸ್ ಫ್ರಾಂಚೈಸಿ ಈ ಬಾರಿ ಯುಎಸ್‌ಎ 29ರ ಪ್ರಾಯದ ವೇಗಿ ಅಲಿ ಖಾನ್‌ ಅವರನ್ನು ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಸಹಿ ಮಾಡಿಸಿಕೊಂಡಿದೆ. ಆ ಮೂಲಕ ಐಪಿಎಲ್‌ ಆಡಲಿರುವ ಮೊದಲ ಅಮೆರಿಕನ್‌ ಎಂಬ ಖ್ಯಾತಿಗೆ ವೇಗದ ಬೌಲರ್‌ ಭಾಜನರಾಗಲಿದ್ದಾರೆ.

 

 

ಅಲಿ ಖಾನ್‌ ಇತ್ತೀಚೆಗೆ ಮುಕ್ತಾಯವಾಗಿದ್ದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚಾಂಪಿಯನ್ಸ್‌ ಟ್ರಿನ್‌ಬ್ಯಾಗೊ ನೈಟ್‌ ರೈಡರ್ಸ್ ತಂಡದ ಪರ ಆಡಿದ್ದರು. ಕೀರನ್‌ ಪೊಲಾರ್ಡ್ ನಾಯಕತ್ವದ ಟಿಕೆಆರ್‌ ತಂಡ ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಎಂಟು ಪಂದ್ಯಗಳಿಂದ ಅಮೆರಿಕನ್‌ ವೇಗಿ ಎಂಟು ವಿಕೆಟ್‌ಗಳನ್ನು ಪಡೆದಿದ್ದರು.

ಟ್ರಿನ್​ಬಾಗೊ ತಂಡ ಕೂಡ ಬಾಲಿವುಡ್​ ನಟ ಶಾರುಖ್​ ಖಾನ್​ ಒಡೆತನದ್ದಾಗಿದೆ. ಇಲ್ಲಿಂದಲೇ ಕೆಕೆಆರ್​ಗೆ ಸೇರಿಕೊಳ್ಳಲು ಅವರಿಗೆ ಸುಲಭ ದಾರಿ ಎಂದು ಹೇಳಲಾಗಿದೆ. ಅಲಿ ಖಾನ್​​ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕೆಕೆಆರ್​ ಈ ಹಿಂದೆಯೇ ಒಂದು ಸಲ ಪ್ರಯತ್ನ ನಡೆಸಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top