fbpx
ಸಮಾಚಾರ

ಬೇಬಿ ಬಂಪ್ ಫೋಟೋ ಹಂಚಿಕೊಂಡ ಅನುಷ್ಕಾ: ಕೊಹ್ಲಿ ಮಾಡಿದ ಕಾಮೆಂಟ್ ಏನು ಗೊತ್ತಾ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ಕಳೆದ ತಿಂಗಳು ಈ ಜೋಡಿ ಬಹಿರಂಗಪಡಿಸಿತ್ತು. ಇದೀಗ ಅನುಷ್ಕಾ ಶರ್ಮ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮತ್ತೊಮ್ಮೆ ‘ಬೇಬಿ ಬಂಪ್’ ಚಿತ್ರವನ್ನು ಪ್ರಕಟಿಸಿದ್ದು, ಅದಕ್ಕೆ ವಿರಾಟ್ ಕೊಹ್ಲಿ ಹಾಕಿರುವ ಕಮೆಂಟ್ ಕೂಡ ಸಾಕಷ್ಟು ಗಮನ ಸೆಳೆದಿದೆ.

 

 

ಬಿಳಿ ಹಾಗೂ ನೀಲಿ ಉಡುಗೆ ಧರಿಸಿರುವ ಅನುಷ್ಕಾ ಶರ್ಮಾ, ತನ್ನ ಹೊಟ್ಟೆಯನ್ನು ನೋಡುತ್ತ ‘ನಿಮ್ಮಲ್ಲಿಯೇ ಒಂದು ಜೀವ ಸೃಷ್ಟಿಯಾಗುತ್ತಿರುವುದನ್ನು ಅನುಭವಿಸುವುದಕ್ಕಿಂತ ಬೇರೆ ನೈಜತೆ ಮತ್ತು ವಿನಮ್ರತೆ ಇಲ್ಲ. ಇದು ನಿಮ್ಮ ನಿಯಂತ್ರಣದಲ್ಲಿ ಇಲ್ಲವೆಂದರೆ ಏನು?’ ಎಂದು ಅನುಷ್ಕಾ ಪ್ರಶ್ನೆ ಮಾಡಿದ್ದಾರೆ.

ಈ ಪೋಸ್ಟ್ ಗೆ ವಿರಾಟ್ ಕೊಹ್ಲಿ ಕೂಡ ಕಮೆಂಟ್ ಹಾಕಿದ್ದು ಸಾಕಷ್ಟು ಗಮನ ಸೆಳೆದಿದೆ. ‘ನನ್ನ ಇಡೀ ಜಗತ್ತು ಒಂದೇ ಫ್ರೇಮ್‌ನಲ್ಲಿದೆ’ ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಅವರ ಈ ಕಮೆಂಟ್ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದಿದ್ದು, ಅಧಿಕ ಲೈಕ್ಸ್‌ಗಳನ್ನು ಪಡೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top