ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಅವರ ಕನಸಿನ ಮನೆ ಮಾರಾಟಕ್ಕಿದೆ. ಯಲಹಂಕದ ಜ್ಯುಡಿಶಿಯಲ್ ಲೇಔಟ್ನಲ್ಲಿರುವ ಅವರ ಮನೆಯನ್ನು ಖಾಸಗಿ ವೆಬ್ ಸೈಟ್ನಲ್ಲಿ ಸೇಲ್ಗೆ ಇಡಲಾಗಿದೆ.
. ಕೇಸ್ ವಿರುದ್ಧ ಹೋರಾಡಲು ಲಾಯರ್ಗೆ ಫೀಸ್ ನೀಡಲೂ ರಾಗಿಣಿ ಪೋಷಕರು ಕಷ್ಟಪಡುತ್ತಿದ್ದಾರೆ. ಈ ಹಿನ್ನೆಲೆ ರಾಗಿಣಿ ಪೋಷಕರು, ಯಲಹಂಕದ ಅನನ್ಯ ಅಪಾರ್ಟ್ಮೆಂಟ್ನಲ್ಲಿರುವ ಪ್ಲಾಟ್ ಸೇಲ್ ಗಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಅನನ್ಯ ಅಪಾರ್ಟ್ಮೆಂಟ್ನ ಎರಡನೇ ಮಹಡಿಯಲ್ಲಿರುವ ಮೂರು ಬೆಡ್ ರೂಮ್ಗಳ 2061 ಚದರಡಿಯ ವಿಶಾಲ ಮನೆಯನ್ನು ಅವರ ತಂದೆ ರಾಕೇಶ್ ದ್ವಿವೇದಿ 2 ಕೋಟಿ ರೂಪಾಯಿಗೆ ಮಾರಾಟಕ್ಕಿಟ್ಟಿದ್ದಾರೆ. ಖಾಸಗಿ ವೆಬ್ಸೈಟ್ನಲ್ಲಿ (NoBroker.In) ಮನೆಯ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
