fbpx
ಸಮಾಚಾರ

ಸೆಪ್ಟೆಂಬರ್ 16: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಸ್ಥಳ- ಕರ್ನಾಟಕ
ಸೆಪ್ಟೆಂಬರ್ 16, 2020 ಬುಧವಾರ
ವರ್ಷ : 1942 ಶಾರ್ವರಿ
ತಿಂಗಳು : ಭಾದ್ರಪದ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ದಶೀ 7:56 pm
ನಕ್ಷತ್ರ : ಮಖ 12:20 pm
ಯೋಗ : ಸಿಧ್ಧ 7:41 am ಸಾಧ್ಯ 3:55 am
ಕರಣ : ವಿಷ್ಟಿ 9:31 am ಶಕುನಿ 7:56 pm

Time to be Avoided
ರಾಹುಕಾಲ : 12:14 pm – 1:44 pm
ಯಮಗಂಡ : 7:42 am – 9:13 am
ದುರ್ಮುಹುರ್ತ : 11:50 am – 12:38 pm
ವಿಷ : 7:30 pm – 8:55 pm
ಗುಳಿಕ : 10:43 am – 12:14 pm

Good Time to be Used
ಅಮೃತಕಾಲ : 10:09 am – 11:36 am

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:19 pm
ರವಿರಾಶಿ : ಸಿಂಹ upto 19:23
ಚಂದ್ರರಾಶಿ : ಸಿಂಹ

 

 

 

 

ಮೇಷ (Mesha)

 

ಬಂಧುಗಳೊಬ್ಬರಿಂದ ಕೆಲವು ಆಸ್ತಿಯ ವಿಚಾರದಲ್ಲಿ ನಿಮಗೆ ಲಾಭವಾಗುವುದು. ನೀವು ಮನೆ ಮಾಡಲು ಅಥವಾ ಖರೀದಿ ಮಾಡಲು ಹಿಂಜರಿಕೆಯ ಸ್ವಭಾವದಿಂದ ಕೈಗೂಡುತ್ತಿಲ್ಲ. ಧೈರ್ಯದಿಂದ ಮುನ್ನುಗ್ಗಿದಲ್ಲಿ ಅನುಕೂಲವಾಗುವುದು.

 

ವೃಷಭ (Vrushabh)


ಕಲಾಕಾರರು, ಕುಶಲಕರ್ಮಿಗಳು ಚಿತ್ರ ಕಲಾವಿದರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಧನಲಾಭಕ್ಕೆ ಕೂಡ ಅನೇಕ ದಾರಿಗಳು ತೆರೆದುಕೊಳ್ಳುವುದು. ಕೆಲವರಿಗೆ ವಿವಾಹ ಭಾಗ್ಯ ದೊರೆಯುವುದು. ಅರ್ಥಾತ್‌ ಮಾತುಕತೆಯು ಪೂರ್ಣಗೊಳ್ಳುವುದು.

ಮಿಥುನ (Mithuna)


 ಈ ದಿನ ನಿಮಗೆ ಶುಭ ತರುವ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಇಂದು ಪೂರ್ಣಗೊಳ್ಳುವವು. ಅದಕ್ಕೆ ಪೂರಕವಾಗಿ ಗುರುವಿನ ಸ್ತೋತ್ರ ಪಠಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗುವುದು.

ಕರ್ಕ (Karka)


ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಹಾಗಂತ ಇತರೆಯವರನ್ನು ಎದುರು ಹಾಕಿಕೊಳ್ಳುವುದು ಸೂಕ್ತವಲ್ಲ. ನೂತನ ವಾಹನ ಖರೀದಿಯನ್ನು ಮುಂದೂಡಿರಿ. ತಾಯಿಯವರ ಆರೋಗ್ಯದ ಕಡೆ ಗಮನ ಕೊಡಿರಿ.

ಸಿಂಹ (Simha)


ಆರ್ಥಿಕ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಬಹು ಮೊತ್ತದ ಹಣ ಕೈಸೇರುವಾಗ ಚಿಲ್ಲರೆ ಹಣವೂ ನಿಮ್ಮ ಕಣ್ತಪ್ಪಿ ಪರರ ಪಾಲಾಗುವುದು. ಮನೆಯಲ್ಲಿ ಸಂತಸದ ವಾತಾವರಣವಿರುವುದು. ಆರೋಗ್ಯ ಉತ್ತಮವಾಗಿರುವುದು.

ಕನ್ಯಾರಾಶಿ (Kanya)


ವ್ಯಾಪಾರ ವ್ಯವಹಾರವು ನಿಮ್ಮ ಎಣಿಕೆಯಂತೆ ಆಗುತ್ತಿರುವುದಕ್ಕೆ ಕಾರಣ ಗುರು-ಹಿರಿಯರ ಆಶೀರ್ವಾದ. ಹಾಗಾಗಿ ನೀವು ಅವರಿಗೆ ಕೃತಜ್ಞರಾಗಿರಬೇಕು. ಹಿರಿಯರ ಮಾತನ್ನು ನಡೆಸಿಕೊಡುವುದೇ ದೇವರ ಪೂಜೆ ಮಾಡಿದಂತೆ. ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ.

ತುಲಾ (Tula)


ಸಮಯೋಚಿತವಾಗಿ ತೆಗೆದುಕೊಂಡ ನಿರ್ಧಾರ ಪ್ರಶಂಸೆಗೆ ಪಾತ್ರವಾಗಲಿದೆ. ನೆಮ್ಮದಿಯಿಂದ ಪ್ರಯಾಣ ಮಾಡುವಿರಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಊಟ-ಉಪಚಾರಗಳಲ್ಲಿ ಅಲಕ್ಷ ಬೇಡ.

ವೃಶ್ಚಿಕ (Vrushchika)


ನೂತನ ವ್ಯಕ್ತಿಗಳ ಪರಿಚಯವಾಗುವುದು. ಉತ್ತಮ ಆದಾಯವನ್ನು ಹೊಂದುವಿರಿ. ದಲ್ಲಾಳಿಗಳಿಗೆ ವ್ಯವಹಾರದಲ್ಲಿ ಉತ್ತಮ ಲಾಭ ಬರುವುದು. ಸಮಸ್ಯೆಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಧನು ರಾಶಿ (Dhanu)


ದೃಢ ನಿರ್ಧಾರವನ್ನು ಮಾಡಿಕೊಳ್ಳ ಬೇಕಾದೀತು. ಉದ್ಯೋಗಸ್ಥರಿಗೆ ಚೇತರಿಕೆ ತುಸು ಸಮಾಧಾನ ತಂದೀತು. ಸಾಂಸಾರಿಕವಾಗಿ ಕೂಡಾ ನೆಮ್ಮದಿ ತಂದರೂ ಹೊಂದಾಣಿಕೆ ಅಗತ್ಯ ವಿರುತ್ತದೆ.ಸಾಂಸಾರಿಕ ಸಂಬಂಧಗಳು ಸುಧಾರಣೆ ತರುತ್ತವೆ. ಉದ್ಯಮಿಗಳಿಗೆ ಶುಭ ಸಮಯವಿದು.

ಮಕರ (Makara)


ಧನ ನಷ್ಟ ಸಂಭವವಿದೆ. ಆರೋಗ್ಯದಲ್ಲಿ ಬದಲಾವಣೆ ಇರುತ್ತದೆ. ವೃತ್ತಿರಂಗದಲ್ಲಿ ನಿರಾಳತೆ ತುಸು ಮನಸ್ಸಿಗೆ ಸಮಾಧಾನ ತರಲಿದೆ. ದಾಯಾದಿಗಳ ವಂಚನೆಗೆ ಕಾರಣರಾಗದಿರಿ.ಲಾಭಾದಾಯಕನಾದ ರಾಹು ಅನಿರೀಕ್ಷಿತ ರೂಪದಲ್ಲಿ ಉತ್ತಮ ಅಭಿವೃದ್ಧಿಗೆ ಕಾರಣನಾದಾನು.

ಕುಂಭರಾಶಿ (Kumbha)


ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ದೂರಾಲೋಚನೆಯಿಂದ ಹಮ್ಮಿಕೊಂಡ ಕೆಲಸಗಳಲ್ಲಿ ಪ್ರಗತಿ ಕಾಣುವುದು. ನಿಮ್ಮನ್ನು ವಿರೋಧಿಸುತ್ತಿದ್ದವರು ನಿಮಗೆ ಶರಣಾಗತರಾಗಿ ಬರುವರು.ನಿಮ್ಮ ಕಾರ್ಯ ಯೋಜನೆಯನ್ನು ಮುಂದುವರಿಸಿರಿ. ಹಿತೈಷಿಗಳ ಬೆಂಬಲ ದೊರೆಯುವುದು.

ಮೀನರಾಶಿ (Meena)


ವ್ಯಾಪಾರ-ವ್ಯವಹಾರಸ್ಥರಿಗೆ ನಿರೀಕ್ಷೆಯಂತೆ ಆದಾಯ ಒದಗಿ ಬರುವುದು. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುವುದು. ಪ್ರಯಾಣದಲ್ಲಿ ಎಚ್ಚರ. ಲಕ್ಷ್ಮೀನಾರಸಿಂಹ ದೇವರನ್ನು ಸ್ಮರಿಸಿರಿ, ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ಪಡೆಯಲಿದ್ದೀರಿ. ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪ ಆಗುವ ಸಾಧ್ಯತೆ ಇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top