fbpx
ಸಮಾಚಾರ

ಬೆಂಗಳೂರು ಜಲಮಂಡಳಿ ನೇಮಕಾತಿ; ಸರ್ವೇಯರ್ ಹುದ್ದೆಗೆ ಅರ್ಜಿ ಅಹ್ವಾನ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸರ್ವೇಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು 25/9/2020 ಕೊನೆಯ ದಿನಾಂಕವಾಗಿದೆ. ಸರ್ವೇಯರ್ ಹುದ್ದೆಗಳಿಗೆ ನಿವೃತ್ತ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಒಟ್ಟು ಎರಡು ಹುದ್ದೆಗಳಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಕಚೇರಿಯಲ್ಲಿ ಸರ್ವೇಯರ್ ಆಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ/ಸ್ವಯಂ ನಿವೃತ್ತಿ ಹೊಂದಿರುವ 70 ವರ್ಷಗಳ ವಯಸ್ಸಿನ ಒಳಗಿನ ಆರೋಗ್ಯವಾಗಿ ಸದೃಢರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಇಚ್ಚಿಸುವವರು ಅರ್ಜಿಗಳನ್ನು 25/9/2020ರ ಸಂಜೆ 5 ಗಂಟೆಯ ಒಳಗೆ ಖುದ್ದಾಗಿ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸಬೇಕು. ವೈಯಕ್ತಿಕ ವಿವರ, ಸರ್ಕಾರಿ ಸೇವೆ ಸಲ್ಲಿಸಿರುವ ವಿವರ, ಪಿಂಚಣಿ ಪುಸ್ತಕದ ನಕಲು ಪ್ರತಿಯ ವಿವರಗಳನ್ನು ಸಲ್ಲಿಸಬೇಕು.

ಕಚೇರಿಯ ವಿಳಾಸ:
ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ,
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ,
1ನೇ ಮಹಡಿ, ಕಾವೇರಿ ಭವನ,
ಕೆ. ಜಿ. ರಸ್ತೆ, ಬೆಂಗಳೂರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top