fbpx
ಸಮಾಚಾರ

ವಿಶ್ವ ಬ್ಯಾಂಕ್ ಉನ್ನತ ಹುದ್ದೆಗೆ ಹರಿಯಾಣದ ಅಧಿಕಾರಿ ನೇಮಕ

ವಾಷಿಂಗ್ಟನ್‌ನಲ್ಲಿ ಇರುವ ವಿಶ್ವ ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕರಾಗಿ (ಇ.ಡಿ) ಹಿರಿಯ ಐಎಎಸ್‌ ಅಧಿಕಾರಿ ರಾಜೇಶ್‌ ಖುಲ್ಲರ್‌ ಅವರನ್ನು ನೇಮಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಕೇಂದ್ರ ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ಈ ಮಾಹಿತಿ ತಿಳಿಸಲಾಗಿದೆ. 1984 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಖುಲ್ಲರ್ 1988ರ ತಂಡದ ಐಎಎಸ್ ಅಧಿಕಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಜಪಾನ್‌ನ ಟೋಕಿಯೊದ ನ್ಯಾಷನಲ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್ (ಜಿಆರ್‍ಪಿಎಸ್) ನಿಂದ ಮಾಸ್ಟರ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪದವಿ ಗಳಿಸಿದ್ದಾರೆ.

ವಿಶ್ವಬ್ಯಾಂಕಿನಲ್ಲಿ 2023, ಆ.31ರ ವರೆಗೆ ಅವರ ಅಧಿಕಾರಾವಧಿಯಿರಲಿದೆ. ಸಿಬಂದಿ ಸಚಿವಾಲಯದ ಇನ್ನೊಂದು ಆದೇಶದಲ್ಲಿ, ಮನಿಲಾದಲ್ಲಿರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನ ‌(ಎಡಿಬಿ) ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ಸಮೀರ್‌ ಕುಮಾರ್‌ ಖರೆಯನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಇವರ ಅಧಿಕಾರಾವಧಿಯೂ 3 ವರ್ಷವಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top