fbpx
ಸಮಾಚಾರ

ಉಪ್ಪಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಬ್ಜ ತಂಡದಿಂದ ವಿಶೇಷ ಗಿಫ್ಟ್

‘ರಿಯಲ್ ಸ್ಟಾರ್’ ಉಪೇಂದ್ರ ನಾಯಕರಾಗಿ ನಟಿಸುತ್ತಿರುವ, ಆರ್ ಚಂದ್ರು ನಿರ್ದೇಶನದ, ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಈಗಾಗಲೇ ಹಲವು ಕಾರಣಗಳಿಂದ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ.

ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬ. ಈ ಸಡಗರಕ್ಕೆ ‘ಕಬ್ಜ’ ಚಿತ್ರತಂಡ ಥೀಮ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡುತ್ತಿದೆ. ಥೀಮ್ ಪೋಸ್ಟರ್‌ನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಬಿಡುಗಡೆ ಮಾಡಲಿದ್ದಾರೆ.

 

 

ಸೆಪ್ಟೆಂಬರ್‌ 17 ರಂದು ಸಂಜೆ 5 ಗಂಟೆಗೆ ರಾಮ್‌ ಗೋಪಾಲ್‌ ವರ್ಮಾ ಚಿತ್ರದ ಥೀಮ್‌ ಪೋಸ್ಟರ್‌ ಬಿಡುಗಡೆ ಮಾಡಲಿದ್ದು, ಏಳು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಉಪೇಂದ್ರ 80ರ ದಶಕದ ಡಾನ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲೇ ಮೂಡಿಬರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆಯಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top