fbpx
ಸಮಾಚಾರ

ರಸ್ತೆ ಮದ್ಯೆಯೇ ನಟಿ-ಸಂಸದೆಗೆ ಲೈಂಗಿಕ ಕಿರುಕುಳ ನೀಡಿದ್ದ ಟ್ಯಾಕ್ಸಿ ಚಾಲನ ಬಂಧನ!

ಬಂಗಾಲಿ ನಟಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿಯ ವಿರುದ್ಧ ಕೀಳು ಮಟ್ಟದ ಕಮೆಂಟ್ ಮಾಡಿದ ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಿಮಿ ಚಕ್ರವರ್ತಿ ಇತ್ತೀಚೆಗೆ ಸಂಜೆ 5 ಗಂಟೆಗೆ ಕೊಲ್ಕೊತ್ತದ ಗರಿಹಟ್​ನಿಂದ ಬಾಲಿಗಂಜ್​ ಕಡೆ ಹೋಗುತ್ತಿದ್ದರಂತೆ. ದಾರಿ ಮಧ್ಯೆ ಮಿಮಿ ಚಕ್ರವರ್ತಿ ಅವರ ಕಾರು ಸಿಗ್ನಲ್​ನಲ್ಲಿ ನಿಂತಾಗ ಅವರ ಪಕ್ಕದಲ್ಲಿದ್ದ ಟ್ಯಾಕ್ಸಿ ಚಾಲಕ, ನಟಿಯನ್ನು ಕೆಟ್ಟದಾಗಿ ನೋಡಿದ್ದಾನಂತೆ. ಸಂಸದೆಯನ್ನು ನೋಡಿಕೊಂಡಿ ಅಶ್ಲೀಲ ಕಮೆಂಟ್ ಪಾಸ್ ಮಾಡಿದ್ದಾನೆ. ಅಲ್ಲದೇ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದಾನೆ.

ತಕ್ಷಣ ಕಾರಿನಿಂದ ಇಳಿದು ಟ್ಯಾಕ್ಸಿ ಚಾಲಕನನ್ನು ಹಿಡಿಯಲು ಪ್ರಯತ್ನಿಸಿದ್ದರಂತೆ ಮಿಮಿ ಚಕ್ರವರ್ತಿ. ಆದರೆ ಆತ ತಪ್ಪಿಸಿಕೊಂಡಿದ್ದಾನೆ.

ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸೋಮವಾರ ಮಧ್ಯರಾತ್ರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಆನಂದ ಪೋರ್ ನಿವಾಸಿ ಲಕ್ಷ್ಮಣ್ ಯಾದವ್ ಎಂದು ಗುರುತಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top