fbpx
ಸಮಾಚಾರ

“ಎಂದೂ ನೀವಿಲ್ಲವೆಂದುಕೊಂಡಿಲ್ಲ; ಕೈ ಹಿಡಿದು ಮುನ್ನಡೆಸಿ” ನಟ ಅನಿರುದ್ದ್

ಇಂದು ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ವಿಷ್ಣು ಅವರ ಅಳಿಯ ನಟ ಅನಿರುದ್ಧ್ ವಿಷ್ಣುವರ್ಧನ್ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

 

ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು.. ಅವರ ಸರಳತನ, ಅವರ ನಿಷ್ಕಲ್ಮಶ ಮನಸ್ಸು.. ಅವರ ಮುಗ್ಧತೆ.. ಅವರ ಔದಾರ್ಯ.. ‌ಅವರ…

Anirudh ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಸೆಪ್ಟೆಂಬರ್ 17, 2020

 

ವಿಷ್ಣು ಅವರ ಹುಟ್ಟುಹ್ಬದ ಪ್ರಯುಕ್ತ ಫೇಸ್‍ಬುಕ್ ಪೋಸ್ಟ್ ಹಾಕಿರುವ ಅನಿರುದ್ಧ್, “ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು. ಅವರ ಸರಳತನ, ನಿಷ್ಕಲ್ಮಶ ಮನಸ್ಸು, ಮುಗ್ಧತೆ, ಔದಾರ್ಯ, ಸಜ್ಜನಿಕೆ, ಬಹುಶಃ ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನಕ್ಕೆ ಸ್ಫೂರ್ತಿಯಾಗಿ ಸಾಧಿಸಲು ಪ್ರಮುಖ ಕಾರಣಕರ್ತರಾಗುವವರೆಂದರೆ ನನಗೆ ಅದು ನೀವೇ.”

” ಎಂದೂ ನೀವಿಲ್ಲವೆಂದುಕೊಂಡಿಲ್ಲ. ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಿರುವಿರಿ. ಜನ್ಮದಿನವಿಂದು ಚಿಕ್ಕವನು ನಾನು ನಾನೇನನು ಹೇಳಲಿ. ಎಲ್ಲರಿಗೂ ನಿಮ್ಮ ಆಶೀರ್ವಾದವಿರಲಿ. ಎಂದಿನಂತೆ ಕೈ ಹಿಡಿದು ಮುನ್ನಡೆಸಿ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top