fbpx
ಸಮಾಚಾರ

ತಾಯಿಯಾದ ಮಯಾಂಟಿ ಲ್ಯಾಂಗರ್: ಐಪಿಎಲ್ ನಿರೂಪಣೆಯಿಂದ ಬಿನ್ನಿ ಪತ್ನಿ ಔಟ್

ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗಲಿದೆ. 6 ತಿಂಗಳು ತಡವಾಗಿ ಐಪಿಎಲ್ ಆರಂಭವಾಗುತ್ತಿದೆ. ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‍ಗಾಗಿ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಈ ಮದ್ಯೆ ಐಪಿಎಲ್‍ನಲ್ಲಿ ನಿರೂಪಣೆ ಮಾಡುವ ಆ್ಯಂಕರ್ಸ್ ಗಳ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಟಾರ್ ನಿರೂಪಕಿ, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಂತಿ ಲ್ಯಾಂಗರ್ ಅವರ ಹೆಸರನ್ನು ಕೈಬಿಡಲಾಗಿದೆ.

ಬಳಿಕ ಮಯಾಂಟಿ ಕೂಡ ಟ್ವೀಟ್ ಮಾಡಿದ್ದು, ಆರು ವಾರಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಬಾರಿಯ ಐಪಿಎಲ್‌ನಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕರ್ನಾಟಕದ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಹಾಗೂ ಮಯಾಂಟಿ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ಬಿನ್ನಿ-ಮಯಾಂಟಿ ದಂಪತಿ ಮಗುವಿನ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.

 

 

ಇನ್ನು ಮಯಾಂತಿ ಲ್ಯಾಂಗರ್ ಸ್ಥಾನವನ್ನ ಆಸ್ಟ್ರೇಲಿಯಾದ ಜನಪ್ರಿಯ ನಿರೂಪಕಿ ನರೋಲಿ ಮೆಂಡೋಸ್ ತುಂಬಲಿದ್ದಾರೆ. ಬಿಗ್​ಬ್ಯಾಷ್ ಲೀಗ್, ಆಸ್ಟ್ರೇಲಿಯಾ ಓಪನ್ಸ್, ಬಾಸ್ಕೆಟ್ ಬಾಲ್ ಸೇರಿದಂತೆ ಹಲವು ಜನಪ್ರಿಯ ಸ್ಫೋರ್ಟ್ಸ್ ಟೂರ್ನಿಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದ ನರೋಲಿ, ಎರಡುವರೆ ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸಲಿದ್ದಾರೆ.

ಉಳಿದಂತೆ ಸುರೆನ್ ಸುಂದರಮ್, ಕಿರಾ ನಾರಾಯಣನ್, ಸುಹೈಲ್ ಚಂದೋಕ್, ನಶ್‌ಪ್ರೀತ್ ಕೌರ್, ಸಂಜನಾ ಗಣೇಶನ್, ಜತಿನ್ ಸಪ್ರು, ತನ್ಯಾಪುರೂಹಿತ್, ಅನಂತ್ ತ್ಯಾಗಿ, ಧೀರಜ್ ಜುನೇಜಾ, ಭಾವ್ನಾ ಬಾಲಕೃಷ್ಣನ್ (ತಮಿಳು), ರೀನಾ ಡಿ ಸೋಜಾ, ಮಧು ಮೈಲಾಂಕೊಡಿ (ಕನ್ನಡ), ನೆಹಾ ಮಾಟ್ಚಾ (ತೆಲುಗು), ಅಂಜುಂ ಚೋಪ್ರಾ, ಲಿಸಾ ಸ್ಟೇಲೆಕರ್ ಹಾಗೂ ನೆರೊಲಿ ಮೆಡೋಸ್ ಟೂರ್ನಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top