fbpx
ಸಮಾಚಾರ

ಗ್ರಾಹಕರಿಗೆ ದೊಡ್ಡ ಶಾಕ್: ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಂ ಆ್ಯಪ್ ಔಟ್

ಭಾರತದಲ್ಲಿ ಹಣಕಾಸು ವ್ಯವಹಾರಕ್ಕೆ ಬಳಕೆಯಾಗುತ್ತಿರುವ ಜನಪ್ರಿಯ ಅಪ್ಲಿಕೇಷನ್ ಪೇಟಿಎಂ ಅನ್ನು ಗೂಗಲ್ ಪ್ಲೇ ನಿಂದ ತೆಗೆದುಹಾಕಲಾಗಿದೆ. ಪೇಟಿಎಂ ಅಪ್ಲಿಕೇಷನ್ ವ್ಯವಹಾರಗಳು ತಮ್ಮ ಪಾಲಿಸಿಗಳಿಗೆ ವಿರುದ್ಧವಾಗಿರುವ ಕಾರಣ ಅದನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕುತ್ತಿರುವುದಾಗಿ ಗೂಗಲ್ ಹೇಳಿಕೆ ತಿಳಿಸಿದೆ.

ಗೂಗಲ್‌ನಲ್ಲಿ ಜೂಜಾಟಕ್ಕೆ ಸಂಬಂಧಿಸಿದ ನೀತಿಗಳ ಉಲ್ಲಂಘನೆಯಿಂದಾಗಿ ಈ ಕ್ರಮವನ್ನು Paytm ನಲ್ಲಿ ಕೈಗೊಳ್ಳಲಾಗಿದೆ. ಹಣವನ್ನು ತೆಗೆದುಕೊಳ್ಳುವ ಮೂಲಕ ಕ್ರೀಡೆಗಳಲ್ಲಿ ಹಣ ಅಥವಾ ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡುವ ಬಾಹ್ಯ ವೆಬ್‌ಸೈಟ್‌ಗೆ ಭೇಟಿ ನೀಡಲು ಗ್ರಾಹಕರನ್ನು ಪ್ರೋತ್ಸಾಹಿಸುವ ಅಪ್ಲಿಕೇಶನ್‌ಗಳು ಇದರಲ್ಲಿ ಸೇರಿವೆ. ಇದು ಗೂಗಲ್ ನ ನೀತಿಗಳ ಉಲ್ಲಂಘನೆಯಾಗಿದೆ.

ಪೇಟಿಎಂ ಆ್ಯಪ್ ಮೂಲಕ ಜೂಜು ಮತ್ತು ಬಾಜಿ ಸ್ಪರ್ಧೆಯನ್ನು ಉತ್ತೇಜಿಸುತ್ತದೆ ಎನ್ನುವ ಕಾರಣ ನೀಡಿ, ಗೂಗಲ್ ಪೇಟಿಎಂಗೆ ನಿಷೇಧ ಹೇರಿದೆ. ಜತೆಗೆ ಜೂಜು ಕಟ್ಟುವ ಯಾವುದೇ ವಿಧದ ಆ್ಯಪ್ ಆಗಲಿ ಅಥವಾ ಗೇಮ್ ಇರಲಿ, ಅವುಗಳನ್ನು ಪ್ಲೇ ಸ್ಟೋರ್‌ನಲ್ಲಿ ಇರಿಸಿಕೊಳ್ಳುವುದಿಲ್ಲ ಎಂದು ಗೂಗಲ್ ಹೇಳಿದೆ. ಈ ಬಗ್ಗೆ ಪೇಟಿಎಂ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.

ಪೆಟಿಎಂ ‘PayTM First Games’ಮೂಲಕ ಹಣ ಗೆಲ್ಲುವ ಆಮೀಷ ನೀಡುತ್ತದೆ. ಹೀಗಾಗಿ ಇನ್ಮುಂದೆ ನಿಮಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ Paytm ಕಾಣಸಿಗುವುದಿಲ್ಲ. ಆದರೆ, ಗೂಗಲ್ ನಲ್ಲಿ Paytm for business, Paytm Mall, Paytm Money ಗಳಂತಹ ಆಪ್ ಗಳು ಮಾತ್ರ ಇರಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top