fbpx
ಸಮಾಚಾರ

ಬಿಜೆಪಿ ಟಿಕೆಟ್ ಕೊಡಿಸುವಂತೆ ಹೇಳಿದ ವ್ಯಕ್ತಿಗೆ ಸೋನು ಸೂದ್ ಖಡಕ್ ಉತ್ತರ: ಪ್ರತಿಕ್ರಿಯೆಗೆ ಫಿದಾ ಆದ ನೆಟ್ಟಿಗರು

ಕೊರೋನಾ ಕಾಲದಲ್ಲಿ ಹಲವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅಕ್ಷರಶಃ ದೇವದೂತನಾಗಿ ಕಾಣಿಸಿಕೊಂಡಿದ್ದಾರೆ. ಯಾರೆಲ್ಲಾ ಕಷ್ಟದಲ್ಲಿದ್ದಾರೋ ಅವರಿಗೆ ತಮ್ಮ ಕೈಯಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ ಸೋನು ಸೂದ್. ಸೋನು ಸೂದ್ ಅವರ ಕಾರ್ಯಕ್ಕೆ ಪ್ರಶಂಸೆಗಳು ಹರಿದು ಬಂದಿವೆ. ನೆಟ್ಟಿಗರು ಸೋನು ಸೂದ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಈ ಮಧ್ಯೆ ಸೋನು ಸೂದ್​ಗೆ ಕೆಲವರು ಎಣ್ಣೆ ತಂದು ಕೊಡುವಂತೆ,ಆಪಲ್ ಐಫೋನ್ ಬೇಕು, ಗರ್ಲ್​ಫ್ರೆಂಡ್​ನ ಮೀಟ್​ ಮಾಡಿಸುವಂತೆ ಇನ್ನೂ ಅನೇಕ ವಿಚಿತ್ರ ಬೇಡಿಕೆಗಳನ್ನ ಬಿಡುತ್ತಿದ್ದಾರೆ. ಆ ಎಲ್ಲಾ ಮನವಿಗಳಿಗೂ ಪ್ರತಿಕ್ರಿಯಿಸಿರುವ ಸೋನು ಸೂದ್​ ಸರಿಯಾಗಿಯೇ ಉತ್ತರಿಸುತ್ತಿದ್ದಾರೆ.

 

 

ಟ್ವಿಟ್ಟರ್ ಬಳಕೆದಾರನೊಬ್ಬ ಸೋನು ಸೂದ್ ಬಳಿ ನನಗೆ ಬಿಜೆಪಿ ಟಿಕೆಟ್ ಕೊಡಿಸಿ ಎಂದು ಕೇಳಿದ್ದಾನೆ. ಇದಕ್ಕೆ ನಟ ಉತ್ತರಿಸಿರುವ ಪರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿ ಸೋನು ಸೂದ್ ಅವರಿಗೆ ಟ್ವೀಟ್ ಮಾಡಿ, ಸರ್ ನಾನು ಬಿಹಾರದ ಭಾಗಲ್ಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನರ ಸೇವೆ ಮಾಡಲು ಬಯಸಿರುತ್ತೇನೆ. ಹೀಗಾಗಿ ದಯವಿಟ್ಟು ನೀವು ನನಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಎಂದು ಹೇಳಿದ್ದಾನೆ.

ಇದಕ್ಕೆ ಉತ್ತರಿಸಿರುವ ಸೋನು, ‘ಬಸ್, ಟ್ರೈನ್ ಹಾಗೂ ಪ್ಲೇನ್ ಟಿಕೆಟ್ ಗಳನ್ನು ಹೊರತುಪಡಿಸಿ ಇನ್ನಾವುದೇ ಟಿಕೆಟ್ ಹೇಗೆ ಕೊಡಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ ನನ್ನ ಸಹೋದರ’ ಎಂದಿದ್ದಾರೆ. ಸೋನು ನೀಡಿರುವ ಈ ಪ್ರತಿಕ್ರಿಯೆ ಇದೀಗ ಅಭಿಮಾನಿಗಳ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top