fbpx
ಸಮಾಚಾರ

ಡಾ. ವಿಷ್ಣು​ 70ನೇ ಹುಟ್ಟುಹಬ್ಬಕ್ಕೆ ಭಾರತೀಯ ಅಂಚೆ ಇಲಾಖೆಯಿಂದ “ವಿಷ್ಣುವರ್ಧನ್ ಅಂಚೆ ಲಕೋಟೆ” ಬಿಡುಗಡೆ

ಸಾಹಸಸಿಂಹ ಡಾ| ವಿಷ್ಣುವರ್ಧನ್‌ ಅವರ 70ನೇ ವರ್ಷದ ಜನ್ಮದಿನಾಚರಣೆ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು “ವಿಶೇಷ ಅಂಚೆ ಲಕೋಟೆ’ಯನ್ನು ಹೊರತಂದಿದ್ದು, ಇಂದು ಬಿಡುಗಡೆಗೊಳ್ಳಲಿದೆ. ಡಾ. ವಿಷ್ಣು ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್​ ಪ್ರಯತ್ನದ ಫಲವಾಗಿ ಈ ಅಂಚೆ ಲಕೋಟೆ ಬಿಡುಗಡೆಯಾಗ್ತಿದೆ.

ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಎದುರಿನ ಕೇಂದ್ರ ಅಂಚೆ ಇಲಾಖೆಯಲ್ಲಿ ಈ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯ ಮೇಘ್ ದೂತ್‌ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕ ಅಂಚೆ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಿ.ಎಸ್‌.ವಿ.ಆರ್‌.ಮೂರ್ತಿ, ಚಿತ್ರ ನಿರ್ದೇಶಕ ಪ್ರೇಮ್‌, ಡಾ| ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಬಿಡುಗಡೆಗೊಳಿಸಲಿದ್ದಾರೆ.

ವಿಷ್ಣುವರ್ಧನ್‌ ಅವರು ಕನ್ನಡ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ 2013ರಲ್ಲಿ ಡಾ| ವಿಷ್ಣುವರ್ಧನ್‌ ಅವರ “ವಿಶೇಷ ಅಂಚೆ ಚೀಟಿ’ಯನ್ನು ಹೊರತಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top