ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಹಲವರು ನಟರಿಗೆ ನೋಟಿಸ್ ನೀಡಿ ವಿಚಾರಣೆ ಮಾಡುತ್ತಿದ್ದಾರೆ. ಪ್ರಕರಣದ ಬಗ್ಗೆ ಕೆಲವು ಸ್ಪೋಟಕ ಸುದ್ದಿಗಳನ್ನು ಮಾಧ್ಯಮದ ಎದುರು ನೀಡುತ್ತಿದ್ದ ಉದ್ಯಮಿ ಪ್ರಶಾಂತ್ ಸಂಬರಗಿ ಈಗ ಮತ್ತೊಂದು ‘ಸ್ಪೋಟಕ’ ಮಾಹಿತಿ ಹೊರಹಾಕುವುದಾಗಿ ಹೇಳಿದ್ದಾರೆ.
ಪ್ರಶಾಂತ್ ಸಂಬರಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಚಿತ್ರರಂಗದ ಇಬ್ಬರು A ಗ್ರೇಡ್ ನಟರು ಸಹ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ದೊಡ್ಡನಟರ ಸಮೇತ ಮತ್ತಷ್ಟು ಜನರ ವಿವರ ಬಹಿರಂಗ ಪಡಿಸುತ್ತೇನೆ ಎಂದು ಪ್ರಶಾಂತ್ ಸಂಬರಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಡ್ರಗ್ಸ್ ದಂದೆಯಲ್ಲಿ ಎಂ.ಎಲ್.ಎ ಮಗ, ಡಾರ್ಕ್ ವೆಬ್ ಬಳಕೆ ಮತ್ತು ಮತ್ತಿಬ್ಬರು ನಟರ ವಿಚಾರಣೆ ಒಂದು ಸಣ್ಣ ಎಳೆ ಅಷ್ಟೇ. ಮುಂದಿನ ದಿನಗಳಲ್ಲಿ ಇಬ್ಬರು ದೊಡ್ಡ ನಟರ ಸಮೇತ ಇನ್ನಷ್ಟು ಜನರ ವಿವರ ಬಹಿರಂಗಪಡಿಸುತ್ತೇನೆ. ಡ್ರಗ್ಸ್ ಮುಕ್ತ ಭಾರತಕ್ಕಾಗಿ ಒಂದಾಗೋಣ.#mla #DrugsMafia #SandalwoodDrugScandal #Bangalore #Kannada #Karnataka
— Veera Indian Prashanth Sambargi (@vip_sambaragi) September 19, 2020
ಸಂಬರಗಿ ಟ್ವೀಟ್ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ. ಇಷ್ಟು ಸಿಸಿಬಿ ಸ್ಯಾಂಡಲ್ವುಡ್ ನ ಬಿ ಗ್ರೇಡ್ ಕಲಾವಿದರನ್ನು ಕರೆದು ವಿಚಾರಣೆ ನಡೆಸುತ್ತಿದೆ. ಇನ್ನು ಸಂಬರಗಿ ಹೇಳಿದಂತೆ ದೊಡ್ಡ ಸ್ಟಾರ ನಟರ ವಿವರ ನೀಡಿದರೆ ಮುಂದೆ ಸ್ಯಾಂಡಲ್ವುಡ್ ನ ಸ್ಟಾರ್ ನಟರ ಹೆಸರು ಹೊರ ಬೀಳಬಹುದು.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮಹತ್ವದ ತನಿಖೆ ಕೈಗೊಂಡಿದ್ದು ಅದಾಗಲೇ ನಟಿಯರಾದ ರಾಗಿಣಿ ಮತ್ತು ಸಂಜನಾರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದೆ. ಮುಂದಿನ ದಿನಗಳಲ್ಲಿ ಇನ್ನು ಯಾರ್ಯಾರು ವಿಚಾರಣೆಗೆ ಹಾಜರಾಗುತ್ತಾರೋ ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
