fbpx
ಸಮಾಚಾರ

ನಟಿ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರ? ಹೊಸ ಬಾಂಬ್

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಮತಾಂತರ ಆಗಿದ್ದರೇ ಎಂಬ ಪ್ರಶ್ನೆ ಎದ್ದಿದೆ. ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಸಂಜನಾ ವಿರುದ್ಧ ಕಿಡಿ ಕಾರುತ್ತಲೇ ಇರುವ, ಆರೋಪಗಳನ್ನು ಮಾಡುತ್ತಲೇ ಇರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ, ಸಂಜನಾ ಬಗ್ಗೆ ಹೊಸದೊಂದು ಮಾಹಿತಿ ಹರಿಬಿಟ್ಟಿದ್ದಾರೆ.

 

 

‘ಸಂಜನಾ ಗಲ್ರಾನೀ ಮುಸ್ಲಿಂ ಧರ್ಮಕ್ಕೆ 2018ರಲ್ಲಿ ಮತಾಂತರಗೊಂಡಿದ್ದಾರೆ. ಈಗ ಅವರ ಹೊಸ ಹೆಸರು ಮಾಹಿರಾ. ನಮ್ಮ ಕರ್ನಾಟಕದಲ್ಲಿ ಲವ್ ಜಿಹಾದ್ ತಾಂಡವವಾಡುತ್ತಿವೆ’! ಹೀಗೆ ನೇರವಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಪ್ರಶಾಂತ್‌ ಸಂಬರಗಿ. ಆದರೆ ಈ ಮಾಹಿತಿಯನ್ನು ದೃಢೀಕರಿಸುವಂತಹ ಯಾವುದೇ ಸಾಕ್ಷಿಯನ್ನು ಅವರು ನೀಡಿಲ್ಲ.

ಇತ್ತೀಚೆಗೆ ನಟಿ ಸಂಜನಾ ಗಲ್ರಾನಿ ಅವರಿಗೆ ಸಂಬಂಧಿಸಿದ ಒಂದು ಫೋಟೋ ವೈರಲ್‌ ಆಗಿತ್ತು. ಅದು ಅವರ ಮದುವೆ ಫೋಟೋ ಇರಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಅಷ್ಟರಲ್ಲಾಗಲೇ ಸಂಜನಾರ ಮತಾಂತರದ ಬಗ್ಗೆ ಪ್ರಶಾಂತ್‌ ಸಂಬರಗಿ ಈ ರೀತಿ ಫೇಸ್‌ಬುಕ್‌ ಪೋಸ್ಟ್‌ ಹಾಕಿರುವುದು ಅಚ್ಚರಿ ಮೂಡಿಸಿದೆ.

 

 

ದಾಖಲೆ ಹಂಚಿಕೊಂಡಿರುವ ಪ್ರಶಾಂತ್ ಸಂಬರ್ಗಿ
ದಾಖಲೆಯೊಂದನ್ನು ಪ್ರಶಾಂತ್ ಸಂಬರ್ಗಿ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದರುಲ್ ಉಲುಮ್ ಶಾ ವಲಿಉಲ್ಲಾ ಎಂಬ ಹೆಸರಿನಿಂದ ಬರೆಯಲಾಗಿರುವ ಈ ಪತ್ರದಲ್ಲಿ, ಅರ್ಚನಾ ಮನೋಹರ್ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು, ಇನ್ನು ಮುಂದೆ ಅವರನ್ನು ಮಹಿರಾ ಎಂದು ಕರೆಯಬೇಕು ಎಂದು ಬರೆಯಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top