fbpx
ಸಮಾಚಾರ

ಜೈಲು ವಾಸದಲ್ಲಿರುವ ರಾಗಿಣಿ, ಸಂಜನಾಗೆ ಮತ್ತೊಮ್ಮೆ ಶಾಕ್

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾಗೆ ಮತ್ತೊಂದು ಶಾಕ್ ಎದುರಾಗಿದೆ. ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿಯನ್ನ ನ್ಯಾಯಾಲಯ ಸೆ.24ಕ್ಕೆ ಮುಂದೂಡಿದೆ.

ನಟಿ ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸಿಸಿಬಿ ಕಾಲಾವಕಾಶ ಕೇಳಿತ್ತು. ಸಿಸಿಬಿ ಮನವಿಗೆ ಸಮ್ಮಿಸಿದ ನ್ಯಾಯಾಲಯ ಸಂಜನಾ ಬೇಲ್ ಅರ್ಜಿಯನ್ನ ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಹಾಗಾಗಿ ಸಂಜನಾ ಇನ್ನು ಮೂರು ದಿನ ಪರಪ್ಪನ ಅಗ್ರಹಾರದಲ್ಲಿರಬೇಕಾಗಿದೆ. ರಾಗಿಣಿ ಅರ್ಜಿಯ ವಿಚಾರಣೆ ನಡೆಸಿದ್ದು, ಆದೇಶವನ್ನು ಸೆಪ್ಟೆಂಬರ್ 24ಕ್ಕೆ ನ್ಯಾಯಾಧೀಶರು ಕಾಯ್ದಿರಿಸಿದ್ದಾರೆ.

ನಟಿ ರಾಗಿಣಿ ವಿರುದ್ಧ ಸಿಸಿಬಿ ಪರ ವಕೀಲರು 12 ಪುಟಗಳ ಆಕ್ಷೇಪಣೆ ಸಲ್ಲಿಸಿ, ಆರೋಪಿಗಳು ಜಾಮೀನು ನೀಡಬಾರದು. ಆರೋಪಿಗಳು ಪ್ರಭಾವಿಗಳಾಗಿದ್ದು, ಪ್ರಕರಣದ ತನಿಖೆಗೆ ಅಡ್ಡಿಯುಂಟಾಗಬಹುದು. ಇವರ ವಿರುದ್ಧ ಗಂಭೀರ ಆರೋಪಗಳಿದ್ದು, ಈ ಹಂತದಲ್ಲಿ ಜಾಮೀನು ಕೊಡುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top