fbpx
ಸಮಾಚಾರ

ಐಪಿಎಲ್ ನೋಡೋ ಯುವಕರಿಗೆ ಈ ಕೆಲ್ಸ ಮಾಡದಂತೆ ‘ಖಡಕ್’ ಬುದ್ದಿಮಾತು ಹೇಳಿದ ನಟ ದರ್ಶನ್!

ಕ್ರಿಕೆಟ್‌ ಪ್ರೇಮಿಗಳ ಎದೆಬಡಿತ ಹೆಚ್ಚಿಸುವ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಪ್ರಾರಂಭವಾಗಿದ್ದು ದೇಶದ್ಯಾಂತ ಯುವಕರಲ್ಲಿ ಐಪಿಎಲ್ ಜ್ವರ ಶುರುವಾಗಿದೆ. ಇಂದು ಐಪಿಎಲ್ ಎನ್ನುವುದು ಕೇವಲ ಮನರಂಜನಾತ್ಮಕವಾಗಿ ಮಾತ್ರ ಉಳಿದಿಲ್ಲ ಎಷ್ಟೋ ಮಂದಿ ಐಪಿಎಲ್ ಶುರುವಾದ ತಕ್ಷಣ ಸಾವಿರದಿಂದ ಹಿಡಿದು ಲಕ್ಷಗಟ್ಟಲೇ ಬೆಟ್ಟಿಂಗ್‍ನಲ್ಲಿ ಹಣ ಕಟ್ತಾರೆ. ಈ ನಿಟ್ಟಿನಲ್ಲಿ ಯುವಜನರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿವಿಮಾತು ಹೇಳಿದ್ದಾರೆ. ವಿಶೇಷ ಎಂದರೆ ಅವರು ಈ ಬಾರಿಯ ಐಪಿಎಲ್‌ ಅನ್ನು ಉದ್ದೇಶಿಸಿ ಅವರು ಈ ಮಾತು ಹೇಳಿದ್ದಲ್ಲ. ಕೆಲವು ವರ್ಷಗಳ ಹಿಂದಿನ ವಿಡಿಯೋ ಈಗ ಮತ್ತೆ ವೈರಲ್‌ ಆಗಿದೆ.

 

 

ipl gambers ಎಂಬ ಕನ್ನಡ ಕಿರುಚಿತ್ರವನ್ನು ಮೆಚ್ಚಿಕೊಂಡು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊಂದನ್ನು ಅಪ್ಲೋಡ್ ಮಾಡಿರುವ ದರ್ಶನ್ ಐಪಿಎಲ್ ನೋಡುವ ಯುವಕರಿಗೆ ಬೆಟ್ಟಿಂಗ್ ನಲ್ಲಿ ತೊಡಗದಂತೆ ಮನವಿ ಮಾಡಿಕೊಂಡಿದ್ದಾರೆ,. “ಐಪಿಎಲ್ ಸ್ಟಾರ್ಟ್ ಆಗಿದೆ ತಕ್ಷಣ ಹೆಚ್ಚು ಜನರು ಬೆಟ್ಟಿಂಗ್ ಕಟ್ಟೋಕೆ ಶುರು ಮಾಡ್ಕೊಬಿಡ್ತಾರೆ, ಮ್ಯಾಚ್ ನೋಡೋದಕ್ಕಿಂತ ಹೆಚ್ಚಾಗಿ ಬೆಟ್ಟಿಂಗ್ ಕಟ್ಟುತ್ತಾ ಇರ್ತಾರೆ. ಬೆಟ್ಟಿಂಗ್ ಕಟ್ಟೋಕೆ ಅಂತಾನೆ ಸಾಲ-ಸೂಲ ಮಾಡಿ ಪಡಬಾರದ ಹರಸಾಹಸ ಪಡ್ತಾರೆ. “ದಯವಿಟ್ಟು ಐಪಿಎಲ್ ಅನ್ನು ಮ್ಯಾಚ್ ರೀತಿಯಲ್ಲಿ ನೋಡಿ, ಎಂಜಾಯ್ ಮಾಡಿ. ಬೆಟ್ಟಿಂಗ್ ಅಂತ ತಲೆ ಕೆಡಿಕೊಂಡು ನಿಮ್ ಜೀವನ ಹಾಳು ಮಾಡ್ಕೋಬೇಡಿ. ಪ್ಲೇಯರ್ಸ್ ಕಷ್ಟ ಪಟ್ಟು ಆಡ್ತಾರೆ ಅದನ್ನು ನೀವು ಇಷ್ಟ ಪಟ್ಟು ನೋಡಿ. ಯಾವುದೇ ಕಾರಣಕ್ಕೂ ಬೆಟ್ಟಿಂಗ್ ಬೂತಕ್ಕೆ ಸಿಲುಕಿ ನರಳಾಡಬೇಡಿ” ಎನ್ನುವ ಮಾತುಗಳನ್ನು ದರ್ಶನ್ ಹಾಡಿದ್ದಾರೆ.

 

 

ದರ್ಶನ್ ಅವರು ಕರ್ನಾಟಕದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ, ಅವರನ್ನು ಕಂಡ್ರೆ ಅಭಿಮಾನಿಗಳಿಗೆ ಎಲ್ಲಿಲ್ಲಿದ ವ್ಯಾಮೋಹ, ಅವರ ಮತನನ್ನು ಚಾಚು ತಪ್ಪದೇ ಪಾಲಿಸುವ ಅಭಿಮಾನಿಗಳು ಕೂಡ ದರ್ಶನ್ ಹೊಂದಿದ್ದಾರೆ. ಹಾಗಾಗಿ ದರ್ಶನ್ ಅವರು ಬೆಟ್ಟಿಂಗ್ ನಂತಹ ಕೆಟ್ಟ ಚಟಗಳ ವಿರುದ್ಧ ಅಭಿಮಾನಿಗಳಿಗೆ ಕಿವಿಮಾತು ಹೇಳಿರುವುದು ಅವರಲ್ಲಿ ಅಂತಹ ಕೆಲಸಗಳನ್ನು ಮಾಡದಂತೆ ಪ್ರೇರೇಪಿಸಲೂಬಹುದು.  ಸಾಮಾಜಿಕ ಕಳಕಳಿಯ ದೃಷ್ಟಿಯಲ್ಲಿ ಇದು ಒಂದೊಳ್ಳೆ ಕೆಲಸ.

 

‘ಐಪಿಎಲ್ ಗ್ಯಾಂಬ್ಲರ್ಸ್‌’ ಎಂಬ ಕಿರುಚಿತ್ರದ ಬಿಡುಗಡೆ ಸಂದರ್ಭದಲ್ಲಿ ದರ್ಶನ್‌ ಈ ವಿಡಿಯೋ ಬೈಟ್‌ ನೀಡಿದ್ದರು. ವರ್ಷಗಳು ಉರುಳಿದರೂ ಕೂಡ ಅವರು ಹೇಳಿದ ಆ ಮಾತು ಇಂದಿಗೂ ಪ್ರಸ್ತುತ ಆಗಿದೆ. ಹಾಗಾಗಿ ಎಲ್ಲರೂ ಆ ವಿಡಿಯೋವನ್ನು ತಮ್ಮ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ, ವಾಟ್ಸಪ್‌ ಸ್ಟೇಟಸ್‌ಗಳಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ದರ್ಶನ್‌ ನೀಡಿದ ಮೆಸೇಜ್‌ ಅನ್ನು ಇನ್ನಷ್ಟು ಜನರಿಗೆ ಹಂಚುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top