fbpx
ಸಮಾಚಾರ

ಸಂಜನಾ ಮತಾಂತರ ವಿವಾದ: ಎಲ್ಲರೂ ಗಮನಿಸಬೇಕಾಗಿರುವ ಮುಖ್ಯ ವಿಷಯ ಹೇಳಿದ ಒಳ್ಳೆ ಹುಡ್ಗ ಪ್ರಥಮ್

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಮತಾಂತರ ಆಗಿದ್ದಾರೆ ಎನ್ನಲಾದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. “ಸಂಜನಾ ಗಲ್ರಾನೀ ಮುಸ್ಲಿಂ ಧರ್ಮಕ್ಕೆ 2018ರಲ್ಲಿ ಮತಾಂತರಗೊಂಡಿದ್ದಾರೆ. ಈಗ ಅವರ ಹೊಸ ಹೆಸರು ಮಾಹಿರಾ.” ಎಂಬ ವಿಚಾರ ಸದ್ದು ಮಾಡುತ್ತಿದೆ.

ಇದೀಗ ಈ ಎಲ್ಲಾ ವಿಚಾರಗಳ ಬಗ್ಗೆ ನಟ ಪ್ರಥಮ್ ಅವ್ರು ಗಮನಿಸಬೇಕಾದ ಪ್ರಮುಖ ಅಂಶವನ್ನು ತಮ್ಮ ಶೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ಸಂಜನಾ ಕುರಿತಾಗಿ ಪ್ರಥಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪೋಸ್ಟ್ ಗಳ ಯಥಾವತ್ತು ರೂಪ ಈ ರೀತಿ ಇದೆ

 

 

ಸಂಜನಾ ರ ಮತಾಂತರಕ್ಕಿಂತ #ಪ್ರವಾಹ ತುಂಬಾ ಅಪಾಯಕಾರಿ:
“ಸಂಜನಾ ಮುಸ್ಲಿಂ ಆದ್ರಂತೆ!convertಮಾಡಿದ್ರಾ?love jihadಇರ್ಬೋದಾ? ಇದೆಲ್ಲಾ ಬಿಡಿ.ಅವರಿಷ್ಟ.ಅವ್ರpersonal.ಯಾರೇನಾದ್ರೂ ಮಾಡಿಕೊಳ್ಳಲಿ!ಮೊದ್ಲು ಉಡುಪಿ,ದಕ್ಷಿಣಕನ್ನಡ,ಬೆಳಗಾವಿ,ಕೊಡಗು ಸೇರಿದಂತೆ ತುಂಬಾಕಡೆ ಪ್ರವಾಹವಾಗುತ್ತಿದೆ.ನಮ್ ಜನ ಸಾಯ್ತಿದಾರೆ.ಜನ-ಜಾನುವಾರುಗಳ ರಕ್ಷಣೆಗೆ ಸರ್ಕಾರ,ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ”

 

 

ಸಂಜನಾ convert ಆಗೋದು ಈ ದೇಶದ ಸಮಸ್ಯೆಯಲ್ಲ:
“ನನ್ನೂರಲ್ಲಿ ಕೃಷಿ ಕೆಲಸದಲ್ಲಿ ನೆಮ್ಮದಿಯ ದಿನ ಕಳೆಯುತ್ತಿದ್ದೇನೆ.ಆಗೊಮ್ಮೆ ಈಗೊಮ್ಮೆ news ನೋಡಿದಾಗ 2020 ವರ್ಷ ಇಷ್ಟೋಂದು ಕ್ರೂರವಾಯ್ತಲ್ಲಾ ಅಂತ ಮನಸ್ಸಿಗೆ ಬಹಳ ಬೇಸರವಾಗುತ್ತದೆ. Most important….. ಸಂಜನಾ convert ಆಗೋದು ಈ ದೇಶದ ಸಮಸ್ಯೆಯಲ್ಲ….ಆಯಮ್ಮನ ಬಗ್ಗೆ ತಲೆಕೆಡಿಸ್ಕೊಳ್ಳೇ think ಮಾಡೋ ಅಗತ್ಯವೂ ಇಲ್ಲ.ಹೋದವರು ಹೋಗ್ಲಿ…!ಆಯಮ್ಮನ ಇಷ್ಟ.ಏನಾದ್ರೂ ಮಾಡಿಕೊಳ್ಳಲಿ…!”

ರಾಗಿಣಿ-ಸಂಜನಾ ರ ಜಪ ಬಿಡಿ:
“ಇಂದಿನಿಂದ session (ವಿಧಾನಸಭಾ ಅಧಿವೇಷನ)ನಡೀತಾ ಇದೆ… ಮಾನ್ಯ ಆಡಳಿತ ಪಕ್ಷ-ವಿರೋಧಪಕ್ಷದವರು ರಾಗಿಣಿ-ಸಂಜನಾ ರ ಜಪ ಬಿಟ್ಟು ದಯವಿಟ್ಟು ಜನ-ಜಾನುವಾರುಗಳನ್ನ ರಕ್ಷಿಸೋಕೆ ಸರ್ವಪಕ್ಷಗಳು ಒಂದಾಗಿ…! ನನಗ್ಯಾವತ್ತೂ celebrity ಅನ್ನೋ #ಅಹಂ ಇಲ್ಲ…! ಒಬ್ಬ ಸಾಮಾನ್ಯ ಭಾರತೀಯನಾಗಿ ಚುನಾಯಿತ ನಾಯಕರಲ್ಲಿ request ಮಾಡ್ಕೊಳ್ತಾ ಇದೀನಿ!🙏 ಸಾಧ್ಯವಾದಷ್ಟು share ಮಾಡಿ…! ನಿಮ್ಮ ನಾಯಕರಿಗೆ ತಲುಪೋ ಹಾಗೆ ಮಾಡಿ…! ನಮ್ಮ ಜನರ ಹಿತ ಕಾಪಾಡಿ…
ನನ್ನ ಉದ್ದೇಶ ಇಷ್ಟೇ!! #ಸಂಜನಾ ರ ಮತಾಂತರಕ್ಕಿಂತ #ಪ್ರವಾಹ ತುಂಬಾ ಅಪಾಯಕಾರಿ ಅಷ್ಟೇ!”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top