ದುಬೈನಲ್ಲಿ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರ್ನಲ್ಲಿ ಗೆದ್ದು ಬೀಗಿದೆ. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಗೆದ್ದು ಬೀಗಿದೆ. ಇನ್ನು, ಗೆಲುವಿನ ಸನಿಹದಲ್ಲಿದ್ದ ಪಂಜಾಬ್ಗೆ ಸೋಲುಂಟಾಗಿದೆ. ಈ ಸೋಲಿಗೆ ಅಂಪೈರ್ ನೀಡಿದ ತಪ್ಪು ನಿರ್ಧಾರವೇ ನೇರ ಕಾರಣ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
19ನೇ ಓವರ್ನಲ್ಲಿ ಕಗಿಸೋ ರಬಾಡ ಎಸೆತದಲ್ಲಿ ಕ್ರಿಸ್ ಜೋರ್ಡನ್ ಹಲವು ರನ್ಗಳನ್ನು ಪಡೆದುಕೊಂಡಿದ್ದರು. ಈ ವೇಳೆ ಲೆಗ್ ಅಂಫೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಿತಿನ್ ಮೆನನ್ ಒಂದು ರನ್ ಶಾರ್ಟ್ ನೀಡಿದ್ದರು. ಆದರೆ, ಟಿವಿ ವಿಡಿಯೋದಲ್ಲಿ ರಿಪ್ಲೇಯಲ್ಲಿ ಜೋಡರ್ನ್ ರನ್ ಪೂರ್ಣಗೊಳಿಸಿರುವುದು ಕಂಡು ಬಂದಿತ್ತು ಹಾಗೂ ಬ್ಯಾಟ್ ಕ್ರೀಸ್ ಒಳಗೆ ಮುಟ್ಟಿರುವುದು ವಿಡಿಯೋ ರಿಪ್ಲೇಯಲ್ಲಿ ಕಂಡುಬಂದಿತ್ತು,.
I don’t agree with the man of the match choice . The umpire who gave this short run should have been man of the match.
Short Run nahin tha. And that was the difference. #DCvKXIP pic.twitter.com/7u7KKJXCLb— Virender Sehwag (@virendersehwag) September 20, 2020
ಆದರೆ, ತೀರ್ಪುಗಾರರು ಕ್ರಿಸ್ ಜೋರ್ಡನ್ ಬ್ಯಾಟ್ ಕ್ರೀಸ್ ಒಳಗೆ ಇಟ್ಟಿಲ್ಲ ಎಂದು ಭಾವಿಸಿದರು. ಅಂಪೈರ್ ನಿತಿನ್ ಮೆನನ್ “ಶಾರ್ಟ್ ರನ್” ನೀಡಿದರು. ಈ ನಿರ್ಧಾರ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಒಂದು ವೇಳೆ “ಶಾರ್ಟ್ ರನ್” ಕೊಡದೆ ಇದ್ದಿದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಸುಲಭವಾಗಿ ಜಯ ಸಾಧಿಸುತ್ತಿತ್ತು.
ಶಾರ್ಟ್ ರನ್ ತೀರ್ಪನ್ನು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸೆಹ್ವಾಗ್, ಮ್ಯಾನ್ ಆಫ್ ದಿ ಮ್ಯಾಚ್ ಆಯ್ಕೆಗೆ ನನ್ನ ಸಹಮತವಿಲ್ಲ. ಶಾರ್ಟ್ ರನ್ ತೀರ್ಪು ನೀಡಿದ್ದ ಅಂಪೈರ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಬೇಕು. ಆದರೆ ಅದು ಶಾರ್ಟ್ ರನ್ ಅಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. ಮತ್ತೊಬ್ಬ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
