fbpx
ಸಮಾಚಾರ

ಮಯಾಂಕ್ ಅಗರ್ವಾಲ್ ಕಿಚ್ಚಿನ ಆಟಕ್ಕೆ ಕಿಚ್ಚನ ಮೆಚ್ಚುಗೆ: ಸುದೀಪ್‌ಗೆ ಕಾಡಿತು ಆ ಪ್ರಶ್ನೆ?

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹದಿಮೂರನೇ ಆವೃತ್ತಿಯ ಐಪಿಎಲ್‌ನ ತನ್ನ ಮೊದಲನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್ ಅಗರ್ವಾಲ್‌ ಅಂತಿಮವಾಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

ಪಂದ್ಯವೀಡಿ ಏಕಾಂಗಿಯಾಗಿ ಹೋರಾಟ ನಡೆಸಿದ ಅವರು 89 ರನ್‌ಗಳನ್ನು ಗಳಿಸಿ ಪಂಜಾಬ್‌ ಫ್ರಾಂಚೈಸಿಯನ್ನು ಗೆಲುವಿನ ಸಮೀಪ ತಂದಿದ್ದರು ಆದರೆ, 158 ರನ್‌ಗಳಿಗೆ ನಿಯಂತ್ರಣಕ್ಕೆ ಒಳಪಟ್ಟರು. ಕೊನೆಯ ಮೂರು ಎಸೆತಗಳಲ್ಲಿ ಒಂದು ರನ್‌ ಗಳಿಸಲಾಗದೆ ಪಂದ್ಯ ಟೈ ಆಯಿತು. ಆದರೆ, ಸೂಪರ್ ಓವರ್‌ನಲ್ಲಿ ಕೇವಲ ಮೂರು ರನ್‌ಗಳ ಗುರಿಯನ್ನು ನೀಡಿದ ಪಂಜಾಬ್‌ ಹೀನಾಯ ಸೋಲು ಅನುಭವಿಸಿತು.

 

 

ಗೆಲ್ಲಲು 157 ರನ್‍ಗಳ ಸುಲಭ ಸವಾಲನ್ನು ಪಡೆದಿದ್ದರೂ ಪಂಜಾಬ್ ತಂಡ ಬೇಗನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ಒಂದು ಕಡೆ ಮಾಯಾಂಕ್ ಅಗರ್ವಾಲ್ ಬಂಡೆಯಂತೆ ನಿಂತು 89 ರನ್(60 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದು ತಂಡವನ್ನು ವಿಜಯದ ಬಾಗಿಲ ಬಳಿ ತಂದು ನಿಲ್ಲಿಸಿದ್ದರು. ಆದರೆ ಕೊನೆಯಲ್ಲಿ ಅದೃಷ್ಟ ಕೈಕೊಟ್ಟ ಪರಿಣಾಮ ಪಂದ್ಯ ಸೂಪರ್ ಓವರಿಗೆ ಹೋಯ್ತು.

ಸೂಪರ್ ಓವರ್‌ನಲ್ಲಿ ಏಕೆ ಮಾಯಾಂಕ್ ಇರಲಿಲ್ಲ?
ಪಂದ್ಯದಲ್ಲಿ ಅದ್ಭುತ ಪ್ರದರ್ಶಿಸಿದ ಮಾಯಾಂಕ್ ಅಗರ್ವಾಲ್ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಬರಲಿಲ್ಲ. ಇದು ಸಹಜವಾಗಿ ಅನುಮಾನ ಮೂಡಿಸಿತು. ಇದೇ ಪ್ರಶ್ನೆಯನ್ನು ಕಿಚ್ಚ ಸುದೀಪ್ ಸಹ ಮುಂದಿಟ್ಟಿದ್ದಾರೆ.

ಸುದೀಪ್ ಟ್ವೀಟ್:
“ಉತ್ತಮ ಆಟ ಆಡಿರುವ ಮಯಾಂಕ್ ಅಗರ್ವಾಲ್ ಬಗ್ಗೆ ನಮಗೆ ಹೆಮ್ಮೆ ಇದೆ. ಪದ್ಯದಲ್ಲಿ ಅದ್ಭುತವಾಗಿ ಆಡಿದರೂ ಸೂಪರ್ ಓವರ್ ನಲ್ಲಿ ನೀವು ಇಲ್ಲದಿದ್ದು ಆಶ್ಚರ್ಯವಾಯಿತು. ಆದರೂ ಕೋವಿಡ್-19 ಸಂದರ್ಭದಲ್ಲಿ ನಿಮ್ಮ ಆಟ ಅತ್ಯಂತ ಮನರಂಜನೆಯನ್ನ ನೀಡಿತು ಗೆಳೆಯ. ಚಿಯರ್ಸ್” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top