fbpx
ಸಮಾಚಾರ

ಡ್ರ*ಗ್ಸ್ ಜಾಲದಲ್ಲಿ ದೀಪಿಕಾ ಹೆಸರು :‘ಗಾಂ*ಜಾ ಬೇಡ, ಮಾಲ್​ ಇದ್ರೆ ಬೇಕಾಗಿತ್ತು’ ಬಿಟೌನ್ ಪದ್ಮಾವತಿ ವಾಟ್ಸಾಪ್​ ಚಾಟ್

ಸ್ಯಾಂಡಲ್​ವುಡ್​ ನಿಂದ ಬಾಲಿವುಡ್​ ವರೆವಿಗೂ ಡ್ರಗ್ಸ್ ಮಾಫಿಯಾ ಲಿಂಕ್ ಸದ್ದು ಜೋರಾಗಿ ಸುದ್ದಿ ಮಾಡುತ್ತಿದ್ದು, ಈಗಾಗಲೇ ಅನೇಕ ನಟ ನಟಿಯರು ಅರೆಸ್ಟ್​​ ಆಗಿದ್ದಾರೆ. ಅಲ್ಲದೆ ಸಾಕಷ್ಟು ಮಂದಿಯ ವಿಚಾರಣೆ ಕೂಡ ನಡೆಯುತ್ತಿದೆ. ಇದೀಗ ಬಿಟೌನ್​ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಹೆಸರು ಡ್ರಗ್ಸ್ ಜಾಲದಲ್ಲಿ ಕೇಳಿಬಂದಿದೆ. ಅದಕ್ಕೆ ಪುರಾವೆ ಎಂಬಂತೆ ವಾಟ್ಸಾಪ್​ ಚಾಟ್​ನಲ್ಲಿ ಅವರ ಬೇಕು ಬೇಡಿಕೆಗಳೆಲ್ಲವೂ ಬಯಲಾಗಿದೆ.

ಹೌದು, ತನಿಖಾ ತಂಡದ ದೃಷ್ಟಿ ಇದೀಗ ದೀಪಿಕಾ ಕಡೆ ನೆಟ್ಟಿದೆ. ಎನ್​ಸಿಬಿ ತಂಡಕ್ಕೆ ದೀಪಿಕಾ ಪಡುಕೋಣೆ ವಾಟ್ಸಾಪ್​ ಚಾಟ್​ನ ಮಾಹಿತಿ ಲಭ್ಯವಾಗಿದ್ದು, ಡ್ರಗ್ಸ್​ಗೆ ಹೇಗೆಲ್ಲ ಬೇಡಿಕೆ ಇಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಕ್ವಾನ್​ ಟ್ಯಾಲೆಂಟ್​ ಮ್ಯಾನೇಜ್​ಮೆಂಟ್​ ಏಜೆನ್ಸಿಯ ಉದ್ಯೋಗಿ ಕರೀಷ್ಮಾ ಜತೆ ನಡೆಸಿದ ವಾಟ್ಸಾಪ್​ ಚಾಟ್​ ಇದೀಗ ಬಹಿರಂಗವಾಗಿದ್ದು, ದೀಪಿಕಾ ಹೇಗೆಲ್ಲ ಮತ್ತು ಯಾರಿಂದ ಡ್ರಗ್​ ಪಡೆದುಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ.

 

 

ವಾಟ್ಸಪ್ ಸಂಭಾಷಣೆ:
ದೀಪಿಕಾ: ನಿಮ್ಮ ಬಳಿ ಮಾಲ್ ಇದೆಯಾ?
ಕರೀಷ್ಮಾ: ಇದೆ, ಆದ್ರೆ ಮನೆಯಲ್ಲಿದೆ. ಆದ್ರೆ ನಾನು ಬಾಂದ್ರಾದಲ್ಲಿದ್ದೇನೆ.
ದೀಪಿಕಾ: ಯೆಸ್, ಪ್ಲೀಸ್
ಕರೀಷ್ಮಾ: ಅಮಿತ್ ಬಳಿ ಇದೆ. ಅವನು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾನೆ.
ದೀಪಿಕಾ: ಹ್ಯಾಶ್ ತಾನೇ? ಗಾಂಜಾ ಅಲ್ಲವಲ್ಲಾ?
ಕರೀಷ್ಮಾ: ಹ್ಯಾಶ್ ಅಲ್ಲ, ಗಾಂಜಾ ಇದೆ. ಬೇಕಾದ್ರೆ ಅಮಿತ್‍ಗೆ ಹೇಳುತ್ತೇನೆ.
ಕರಿಷ್ಮಾ: ನೀವು ಕೊಕೊಗೆ ಎಷ್ಟು ಸಮಯದಿಂದ ಬರುತ್ತಿದ್ದೀರಿ?
ದೀಪಿಕಾ: 11: 30/12: 00ish
ದೀಪಿಕಾ: ಶಾಲ್ ಅಲ್ಲಿ ಎಲ್ಲಿದ್ದಾರೆ?
ಕರಿಷ್ಮಾ: ಅವರು ಬಹುಶಃ 11: 30 ಕ್ಕೆ ಹೇಳಿದರು, ಏಕೆಂದರೆ ಅವರು ಮಧ್ಯಾಹ್ನ 12 ರ ಹೊತ್ತಿಗೆ ಬೇರೆ ಸ್ಥಳಕ್ಕೆ ಹೋಗಬೇಕಾಗಿದೆ.
ಹೀಗೆ ಈ ಸಂಭಾಷಣೆ ಮುಂದುವರಿಯುತ್ತದೆ. ದೀಪಿಕಾ ತಮಗೆ ಮಾಲ್ ತಲುಪಿಸುವ ಸಮಯದ ಬಗ್ಗೆಯೂ ಹೇಳುತ್ತಾರೆ. ಈ ಚಾಟ್ ವೇಳೆ ಶಾಲ್ ಎಂಬಾತನ ಹೆಸರು ಬರುತ್ತದೆ. ಚಾಟ್ ರಿವೀಲ್ ಬಳಿಕ ದೀಪಿಕಾ ಪಡುಕೋಣೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ರೀತಿ ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ನಡೆಸಿರುವ ವಾಟ್ಸಪ್ ಸಂಭಾಷಣೆಯ ಮಾಹಿತಿ ರಿವೀಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top