fbpx
ಸಮಾಚಾರ

ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ: ನಟ ಲೂಸ್ ಮಾದ ಯೋಗಿಯಿಂದ ಮತ್ತೊಂದು ಎಡವಟ್ಟು

ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಎಸ್‍ಡಿ(ಆಂತರಿಕ ಭದ್ರತಾ ವಿಭಾಗ) ವಿಚಾರಣೆ ಎದುರಿಸಿರುವ ನಟ ಲೂಸ್ ಮಾದ ಯೋಗಿ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಯೋಗಿ ಭಾಗಿಯಾಗಿದ್ದ ಒಂದು ಪಾರ್ಟಿಯ ವೇಳೆ ಕಿರಿಕ್​ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲ ತಳುಕು ಹಾಕಿಕೊಂಡಿರುವುದು ಭಾರೀ ಸಂಚಲನ ಉಂಟುಮಾಡಿದ್ದರೂ.. ಕೇವಲ ಎರಡು ದಿನಗಳ ಹಿಂದೆ ಯೋಗಿ ಅಪಾರ್ಟ್​ಮೆಂಟ್​ನಲ್ಲಿ ನಡೆದ ಪಾರ್ಟಿಯಿಂದ ಅಕ್ಕಪಕ್ಕದ ಫ್ಲ್ಯಾಟ್​ನವರಿಗೆ ಕಿರಿಕಿರಿ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರಂತೆ.

ತಡರಾತ್ರಿಯವರಿಗೆ ಗಲಾಟೆ ಆಗುತ್ತಿದ್ದರಿಂದ ಬೇಸತ್ತ ಅಪಾರ್ಟ್ ಮೆಂಟ್ ನವರು ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಗಿರಿನಗರ ಪೊಲೀಸರು ಭೇಟಿ ನೀಡಿದ್ದಾರೆ. ಇದೇ ವೇಳೆ ಗಲಾಟೆ ಮಾಡದಂತೆ ಲೂಸ್ ಮಾದ ಯೋಗಿ ಹಾಗೂ ತಂಡಕ್ಕೆ ಪೊಲೀಸರು ವಾರ್ನ್ ಮಾಡಿ ಬಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top