fbpx
ಸಮಾಚಾರ

ಸೆಪ್ಟೆಂಬರ್ 22: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಸ್ಥಳ: ಕರ್ನಾಟಕ
ಸೆಪ್ಟೆಂಬರ್ 23, 2020 ಬುಧವಾರ
ವರ್ಷ : 1942 ಶಾರ್ವರಿ
ತಿಂಗಳು : ಆಶ್ವೇಜ (Adhik), ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಸಪ್ತಮೀ 7:56 pm
ನಕ್ಷತ್ರ : ಜ್ಯೇಷ್ಠ 6:25 pm
ಯೋಗ : ಆಯುಷ್ಮಾನ್ 11:40 pm
ಕರಣ : ಗರಿಜ 8:38 am ವಾಣಿಜ 7:56 pm

Time to be Avoided
ರಾಹುಕಾಲ : 12:11 pm – 1:41 pm
ಯಮಗಂಡ : 7:42 am – 9:11 am
ದುರ್ಮುಹುರ್ತ : 11:47 am – 12:35 pm
ವಿಷ : 2:20 am – 3:55 am, 4:52 pm – 6:25 pm
ಗುಳಿಕ : 10:41 am – 12:11 pm

Good Time to be Used
ಅಮೃತಕಾಲ : 9:56 am – 11:29 am

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:14 pm
ರವಿರಾಶಿ : ಕನ್ಯ
ಚಂದ್ರರಾಶಿ : ವೃಶ್ಚಿಕ upto 18:25

 

 

 

ನೀವು ಮಾಡುವ ಕೆಲಸವನ್ನು ಜನರು ಬಹಿರಂಗವಾಗಿ ಹೊಗಳದಿದ್ದರೂ ನಿಮ್ಮ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವರು. ಹಾಗಾಗಿ ನೀವು ತೀರಿಸಬೇಕಾಗಿರುವ ಸಾಲದ ಬಗೆಗೂ ಯಾರೂ ಒತ್ತಡ ಹೇರುತ್ತಿಲ್ಲ. ನ್ಯಾಯಯುತವಾಗಿ ದುಡಿದು ಹಣ ಮರು ಪಾವತಿಸುವಿರಿ.

ವಿಪರೀತ ದಣಿದು ಕೆಲಸಕ್ಕೆ ಮುಂದಾಗದಿರಿ. ಕೆಲಸದ ಒತ್ತಡದ ನಡುವೆ ಸ್ವಲ್ಪ ವಿಶ್ರಾಂತಿ ಪಡೆಯಿರಿ. ನಿಮ್ಮ ಕೈಲಿ ಆಗುವಷ್ಟು ಕೆಲಸವನ್ನು ಮಾತ್ರ ಒಪ್ಪಿಕೊಳ್ಳಿ.

ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಕಚೇರಿಗೆ ಹೊರಡುವಾಗ ಐದು ಅಥವಾ ಹತ್ತು ನಿಮಿಷ ಮುಂಚೆಯೇ ಮನೆಯಿಂದ ಹೊರಡಿ. ಅನಗತ್ಯ ಒತ್ತಡದಿಂದ ದೂರವಿರಿ. ಕೆಲಸಗಳು ಮನಸ್ಸಿಗೆ ನೆಮ್ಮದಿ ನೀಡುವವು.

ಅಪರಿಚಿತರನ್ನು ಹೆಚ್ಚು ಪರಿಚಯ ಮಾಡಿಕೊಂಡು ಸಂಕಷ್ಟಕ್ಕೆ ಗುರಿಯಾಗುವಿರಿ. ಅಂತಹವರಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಸಂಗಾತಿಯ ಸಲಹೆಯಂತೆ ನಡೆದರೆ ಕ್ಷೇಮ.

 

ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧರಿಸುತ್ತಾರೆ ಎಂದು ತಿಳಿದು ಕಾರ್ಯದಿಂದ ಹಿಂದೆ ಸರಿಯಬೇಡಿ. ಮುನ್ನುಗ್ಗಿ ಪ್ರವೃತ್ತರಾದಲ್ಲಿ ಇಚ್ಛಿತ ಗುರಿ ತಲುಪುವಿರಿ.

 

ಹಣಕಾಸಿನ ಮುಗ್ಗಟ್ಟು ಅನುಭವಿಸುವಿರಿ. ಆದರೆ ಸಕಾಲದಲ್ಲಿ ನೆಂಟರ ಅಥವಾ ಸ್ನೇಹಿತರಿಂದ ಸಹಕಾರ ದೊರೆಯುವುದು. ಹಾಗಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ತಪ್ಪದೇ ವಿಷ್ಣುಸಹಸ್ರನಾಮ ಪಠಿಸಿ.

 

ಪರರ ಜೀವನಕ್ಕೆ ನಿಮ್ಮ ಜೀವನವನ್ನು ಹೋಲಿಸಿಕೊಂಡು ಖಿನ್ನರಾಗದಿರಿ. ಭಗವಂತ ಪ್ರತಿಯೊಬ್ಬರಿಗೂ ತನ್ನದೇ ಆದ ಒಂದು ವ್ಯಕ್ತಿತ್ವ ನೀಡಿರುವನು. ಆ ಪ್ರತ್ಯೇಕತೆಯ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸಲ್ಪಡುವಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

 

ಮಹತ್ತರ ಕಾರ್ಯಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು. ಹಣ ಉಳಿತಾಯ ಮಾಡಲಾಗುವುದಿಲ್ಲ. ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ. ಮನಸ್ಸಿಗೆ ಶಾಂತಿ ದೊರಕುವುದು. ಮೌನದಿಂದ ಕಾರ್ಯ ನಿರ್ವಹಿಸಿ.

 

ನಿಮ್ಮ ಶಕ್ತಿಯ ವಿಚಾರದಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ನಿಮ್ಮ ಸರಳ ಜೀವನದಿಂದ ನೀವು ಪರರಿಗೆ ಮಾರ್ಗದರ್ಶಕರಾಗುವಿರಿ. ನಾಯಕತ್ವದ ಗುಣಗಳನ್ನು ಕಂಡು ಜನ ನಿಮ್ಮ ಸುತ್ತ ತಿರುಗುವರು.

ಮನೆಯಲ್ಲಿ ಶಾಂತಿ ನೆಲೆಸುವುದು. ಕಚೇರಿಯ ಕೆಲಸದಲ್ಲಿ ಮೇಲಧಿಕಾರಿಗಳು ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು. ಹಣಕಾಸಿನ ನೆರವು ದೊರೆಯುವುದು.

 

 

ನಿಮ್ಮ ಕುಟುಂಬದ ಹಳೆಯ ಸ್ನೇಹಿತರ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರುವವು. ಆದರೆ ಹಣಕಾಸಿನ ವಿಚಾರವನ್ನು ತೂಗಿಸಲು ಅನ್ಯರ ಬಳಿ ಸಾಲ ಮಾಡಬೇಕಾಗುವುದು. ಮಾತಿನಲ್ಲಿ ನಯ ವಿನಯ ರೂಢಿಸಿಕೊಳ್ಳಿ.

ಸಾದಾ, ಸೀದಾ ವ್ಯಕ್ತಿಯಾಗಿರುವ ನಿಮ್ಮನ್ನು ಇತರರು ಮೋಸ ಮಾಡುವ ಇಲ್ಲವೆ ಯಾಮಾರಿಸುವ ಯೋಜನೆಯಲ್ಲಿರುವರು. ಹಾಗಾಗಿ ಎಲ್ಲರೆದುರು ನಿಮ್ಮತನ ಪ್ರದರ್ಶಿಸಬೇಡಿ. ಇದರಿಂದ ತೊಂದರೆಗಳಿಗೆ ಸಿಲುಕಿಕೊಳ್ಳುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top